ವಿಶ್ವ ದಾಖಲೆ ನಿರ್ಮಿಸಿದ ಧೋನಿ

Update: 2019-06-06 18:34 GMT

ಸೌಥಾಂಪ್ಟನ್, ಜೂ.6: ದಕ್ಷಿಣ ಆಫ್ರಿಕ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಜೇಯ ಶತಕದಿಂದ ಮಿಂಚಿದರೆ, ಜಸ್‌ಪ್ರೀತ್ ಬುಮ್ರಾ ನೇತೃತ್ವದ ಬೌಲರ್‌ಗಳು ಕರಾರುವಾಕ್ ಬೌಲಿಂಗ್‌ನಿಂದ ಕಣ್ಮನ ಸೆಳೆದಿದ್ದಾರೆ. ಈ ಮಧ್ಯೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವ ದಾಖಲೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

   ಧೋನಿ 600 ಅಂತರ್‌ರಾಷ್ಟ್ರೀಯ ಇನಿಂಗ್ಸ್‌ಗಳನ್ನು ಆಡಿದ ಮೊದಲ ವಿಕೆಟ್‌ಕೀಪರ್ ಎನಿಸಿಕೊಂಡು ವಿಶ್ವ ದಾಖಲೆ ಬರೆದರು. 37ರ ಹರೆಯದ ಧೋನಿ ದಕ್ಷಿಣ ಆಫ್ರಿಕ ಇನಿಂಗ್ಸ್ ನಲ್ಲಿ ಚಹಾಲ್ ಎಸೆತದಲ್ಲಿ ಫೆಹ್ಲುಕ್ವಾಯೊರನ್ನು ಸ್ಟಂಪಿಂಗ್ ಮೂಲಕ ಔಟ್ ಮಾಡಿದರು. ಈ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದರು. ಇದೇ ವೇಳೆ ಧೋನಿ ಲಿಸ್ಟ್ ಎ ನಲ್ಲಿ 139ನೇ ಸ್ಟಂಪಿಂಗ್ ಮಾಡುವುದರೊಂದಿಗೆ ಪಾಕಿಸ್ತಾನದ ಮೊಯಿನ್ ಖಾನ್ ದಾಖಲೆಯನ್ನು ಸರಿಗಟ್ಟಿದರು. ಫೆಹ್ಲುಕ್ವಾವೊರನ್ನು ಸ್ಟಂಪಿಂಗ್ ಮಾಡಿದ ಧೋನಿ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಟಂಪಿಂಗ್ ಮಾಡಿದ ನ್ಯೂಝಿಲ್ಯಾಂಡ್‌ನ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದರು. ಧೋನಿ ಇದೀಗ ವಿಶ್ವಕಪ್‌ನಲ್ಲಿ 33 ವಿಕೆಟ್ ಬಲಿ ಪಡೆದಿದ್ದಾರೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ ಅಮೂಲ್ಯ 34 ರನ್ ಗಳಿಸಿದ್ದಲ್ಲದೆ ಪಂದ್ಯಶ್ರೇಷ್ಠ ರೋಹಿತ್ ಶರ್ಮಾರೊಂದಿಗೆ 74 ರನ್ ಜೊತೆಯಾಟದಲ್ಲಿ ಭಾಗಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News