ಮಿಚಿಗನ್: 'ಇಸಿಬಿಇ' ಮಾನ್ಯತಾ ಪ್ರಮಾಣ ಪತ್ರ ಪಡೆದ ಡಾ. ಕಾಪು ಮುಹಮ್ಮದ್

Update: 2019-06-07 17:35 GMT

ಮಿಚಿಗನ್, ಜೂ.7: ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ಮತ್ತು ಅದರ ಅಂಗಸಂಸ್ಥೆಯ ಡೀನ್ ಮತ್ತು ವ್ಯವಸ್ಥಾಪನಾ ನಿರ್ದೇಶಕರು ಹಾಗೂ ಅಮೆರಿಕದ ಮಿಚಿಗನ್‌ನಲ್ಲಿರುವ ಮಡೋನ್ನಾ ವಿಶ್ವವಿದ್ಯಾನಿಲಯದ ಅರೆಕಾಲಿಕ ಉಪನ್ಯಾಸಕರಾಗಿರುವ ಪ್ರೊ. ಡಾ. ಕಾಪು ಮುಹಮ್ಮದ್  ಅವರು  ಬಿಸಿನೆಸ್ ಆ್ಯಡ್ಮಿನಿಸ್ಟ್ರೇಶನ್‌ನಲ್ಲಿ ಸುಧಾರಿತ ಡಿಪ್ಲೊಮ ಮತ್ತು ಸ್ನಾತಕೋತ್ತರ ಡಿಪ್ಲೊಮಕ್ಕಾಗಿ ಯೂರೋಪಿಯನ್  ಕೌನ್ಸಿಲ್  ಫೋರ್ಬಿಸಿನೆಸ್ ಎಜ್ಯುಕೇಶನ್‌ನಿಂದ ಲಂಡನ್ ಅಮೆರಿಕನ್ ಸಿಟಿ ಕಾಲೇಜಿಗೆ ಮಾನ್ಯತಾ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಘಟಿಕೋತ್ಸವ ಕಾರ್ಯಕ್ರಮವು ಬೆಲ್ಜಿಯಂನ ಬ್ರೂಸೆಲ್ಸ್‌ನಲ್ಲಿ ಸಿಬಿಇ ಅಧ್ಯಕ್ಷ, ಡಾ. ಪೊವೆಲ್ ಝುಫನ್, ಇಸಿಬಿಇ ನಿರ್ದೇಶಕ ಡಾ. 
ಜಾನ್ ವನ್ಹೆರ್ಕ್, ಕಮೀಷನ್‌ಗಳ ಮಂಡಳಿಯ ಮುಖ್ಯಸ್ಥ ಡಾ. ರಾಬರ್ಟ್ರಿಬ್ರೊಕ್, ಪರಿಶೀಲನ ಮಂಡಳಿ ಮುಖ್ಯಸ್ಥ ಡಾ. ಬಾಬ್ ಜಾನ್ಸನ್, ಮಾನ್ಯತ ನಿರ್ದೇಶಕಿ ಡಾ. ಪೊಲೊನ ಟೊಮಿನ್ಕ್ ಅವರ ಉಪಸ್ಥಿತಿಯಲ್ಲಿ ನಡೆಯಿತು. 

ಮಾನ್ಯತೆಯನ್ನು ಪಡೆಯಲು ಬಹಳಷ್ಟು ಶ್ರಮ ಮತ್ತು ಬದ್ಧತೆಯ ಅಗತ್ಯವಿದೆ ಎಂದು ಡಾ. ಕಾಪು ತಿಳಿಸಿದ್ದಾರೆ. 

ಈ ಮಾನ್ಯತೆಯನ್ನು ಪಡೆಯಲು ಅಧ್ಯಕ್ಷ ಮತ್ತು ಸಿಇಒ ಡಾ. ಪೌಲ್ಸನ್, ಕಾಲೇಜು ಶಿಕ್ಷಕವರ್ಗ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳು ಪ್ರಾಮಾಣಿಕ ಕಾಣಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News