ಕ್ರಿಕೆಟ್ ತೊರೆದು ಟೆನಿಸ್ ರ‍್ಯಾಕೆಟ್ ಹಿಡಿದಾಕೆ ಫ್ರೆಂಚ್ ಓಪನ್ ಫೈನಲ್ ಗೆ !

Update: 2019-06-08 18:14 GMT

ಪ್ಯಾರಿಸ್, ಜೂ.8: ಫ್ರೆಂಚ್ ಓಪನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್ ತಲುಪಿರುವ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಅವರು ಹಿಂದೆ ಕ್ರಿಕೆಟ್ ಆಟಗಾರ್ತಿಯಾಗಿ ಮಿಂಚಿದ್ದರು.

ಆ್ಯಶ್ಲೆ ಬಾರ್ಟಿ ಸೆಮಿಫೈನಲ್ ನಲ್ಲಿ ಹದಿನೇಳರ ಹರೆಯದ ಅಮೆರಿಕಾದ ಆಟಗಾರ್ತಿ ಅಮಂಡಾ ಅನಿಸಿಮೊವಾರನ್ನು 6-7(4), 6-3, 6-3 ಅಂತರದಲ್ಲಿ ಮಣಿಸಿ ಫೈನಲ್ ತಲುಪಿದ್ದಾರೆ. 2010ರಲ್ಲಿ ಸ್ಯಾಮ್ ಸ್ಟೊಸುರ್ ಬಳಿಕ ಫ್ರೆಂಚ್ ಓಪನ್ ಟೆನಿಸ್ ನಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಆ್ಯಶ್ಲೆ ಬಾರ್ಟಿ ಫೈನಲ್ ನಲ್ಲಿ ಝೆಕ್ ಗಣರಾಜ್ಯದ ಆಟಗಾರ್ತಿ ಮರ್ಕೆಟಾ ವೊಂಡ್ರೊಸೊವಾರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ನಲ್ಲಿ ಫೈನಲ್ ತಲುಪಿರುವ ಆ್ಯಶ್ಲೆ ಬಾರ್ಟಿ 2014ರಲ್ಲಿ ಸ್ವಲ್ಪ ಸಮಯ ಟೆನಿಸ್ ನಿಂದ ದೂರ ಸರಿದು, ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ಲೀಗ್ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಪರ ಆಡಿದ್ದರು ಎನ್ನುವುದು ಇಲ್ಲಿ ಗಮನಾರ್ಹ . ವಿಮೆನ್ಸ್ ಬಿಗ್ ಬ್ಯಾಶ್ ಲೀಗ್ ನಲ್ಲಿ ಬಾರ್ಟಿ ಅವರು ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 27 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News