ಇರಾನ್ ಪೆಟ್ರೋಕೆಮಿಕಲ್ ಉದ್ಯಮದ ಮೇಲೆ ಅಮೆರಿಕ ದಿಗ್ಬಂಧನ

Update: 2019-06-08 16:48 GMT

ವಾಶಿಂಗ್ಟನ್, ಜೂ. 8: ಇರಾನ್‌ನ ಪೆಟ್ರೋಕೆಮಿಕಲ್ ಉದ್ಯಮದ ಮೇಲೆ ಅಮೆರಿಕ ಶುಕ್ರವಾರ ಹೊಸ ದಿಗ್ಬಂಧನಗಳನ್ನು ವಿಧಿಸಿದೆ. ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಸೇನಾ ಘಟಕಕ್ಕೆ ಅದು ನೀಡುತ್ತಿರುವ ಆರ್ಥಿಕ ಬೆಂಬಲಕ್ಕಾಗಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವ್ ಮನುಚಿನ್ ಹೇಳಿದ್ದಾರೆ.

ಈ ದಿಗ್ಬಂಧನವು ಪರ್ಸಿಯನ್ ಕೊಲ್ಲಿ ಪೆಟ್ರೋಕೆಮಿಕಲ್ ಇಂಡಸ್ಟ್ರೀಸ್ ಕಂಪೆನಿ ಮತ್ತು ಅದರ 39 ಉಪ ಕಂಪೆನಿಗಳು ಹಾಗೂ ವಿದೇಶಗಳಲ್ಲಿರುವ ಮಾರಾಟ ಏಜಂಟ್‌ಗಳ ಮೇಲೆ ಪ್ರಭಾವ ಬೀರುತ್ತದೆ.

‘‘ಈ ಜಾಲವನ್ನು ಗುರಿಮಾಡುವ ಮೂಲಕ ನಾವು ಐಆರ್‌ಜಿಸಿಗೆ ನೆರವು ನೀಡುವ ಇರಾನ್‌ನ ಪೆಟ್ರೋಕೆಮಿಕಲ್ ಕ್ಷೇತ್ರದ ಮಹತ್ವದ ವಿಭಾಗಗಳಿಗೆ ಹಣ ಹೋಗುವುದನ್ನು ನಿಲ್ಲಿಸಲು ಬಯಸಿದ್ದೇವೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News