ತೃಣಮೂಲ- ಬಿಜೆಪಿ ಸಂಘರ್ಷಕ್ಕೆ ಮೂವರು ಬಲಿ

Update: 2019-06-09 14:20 GMT

ಕೊಲ್ಕತ್ತಾ: ಪಶ್ಚಿಮ ಬಂಗಾಲದ ಉತ್ತರ 24 ಪರಗಣಾ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ ಮೂರು ಮಂದಿ ಬಲಿಯಾಗಿದ್ದಾರೆ.

ಈ ಪೈಕಿ ಒಬ್ಬರು ಟಿಎಂಸಿ ಕಾರ್ಯಕರ್ತರು ಹಾಗೂ ಇಬ್ಬರು ಬಿಜೆಪಿಗೆ ಸೇರಿದವರು.

ಸಂದೇಶಖಾಲಿ ಪ್ರದೇಶದ ನಯ್‌ಜೋತ್ ಎಂಬಲ್ಲಿ ಶನಿವಾರ ಸಂಜೆ 7ರ ಬಳಿಕ ಘರ್ಷಣೆ ಆರಂಭವಾಗಿದೆ. ಹಾತ್‌ಗಂಚಾ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಿಂದ ಪಕ್ಷಗಳ ಧ್ವಜಗಳನ್ನು ತೆಗೆಯುವ ಸಂದರ್ಭದಲ್ಲಿ ಘರ್ಷಣೆ ಆರಂಭವಾಯಿತು ಎನ್ನಲಾಗಿದೆ.

ಪರಿಸ್ಥಿತಿ ತಿಳಿಗೊಳಿಸಲು ಭಾರಿ ಪ್ರಮಾಣದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಖಯೂಮ್ ಮುಲ್ಲಾ ಗುಂಡೇಟಿಗೆ ಬಲಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಪ್ರದೀಪ್ ಮಂಡಲ್ ಮತ್ತು ಸುಕಾಂತ ಮಂಡಲ್ ಕೂಡಾ ಮೃತರಲ್ಲಿ ಸೇರಿದ್ದಾರೆ.

ಶನಿವಾರ ಮಧ್ಯರಾತ್ರಿವರೆಗೆ ಬಶೀರ್‌ಹತ್ ಆಸ್ಪತ್ರೆಗೆ ಮೂರು ಶವಗಳನ್ನು ತರಲಾಗಿದೆ. ಆದರೆ ತಪನ್ ಮಂಡಲ್ ಎಂಬ ಮತ್ತೊಬ್ಬ ಕಾರ್ಯಕರ್ತ ಮೃತಪಟ್ಟಿದ್ದಾಗಿ ಬಿಜೆಪಿ ಹೇಳಿದೆ. ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದೂ ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News