ಮೆಟ್ರೊ ಸ್ಟೇಷನ್ ನಲ್ಲಿ ತಲೆ ಕತ್ತರಿಸಲ್ಪಟ್ಟ ಮಹಿಳೆಯ ಶವ ಪತ್ತೆ

Update: 2019-06-09 07:53 GMT

ಹೊಸದಿಲ್ಲಿ, ಜೂ.9: ಇಲ್ಲಿನ ಜಹಾಂಗೀರ್‍ ಪುರಿ ಮೆಟ್ರೊ ರೈಲು ನಿಲ್ದಾಣದ ಬಳಿ ಶನಿವಾರ ಸಂಜೆ ಹೊದಿಕೆಯಲ್ಲಿ ಸುತ್ತಿಟ್ಟ ಮಹಿಳೆಯ ಶವ ಪತ್ತೆಯಾಗಿದೆ.

ತಲೆ ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಕಂಡುಬಂದಿದ್ದು, ಹೊದಿಕೆಯಲ್ಲಿ ಸುತ್ತಿ ಪೆಟ್ಟಿಗೆಯೊಂದರಲ್ಲಿ ಇರಿಸಿ ಸೈಕಲ್ ಮೇಲೆ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಎರಡು- ಮೂರು ದಿನ ಮೊದಲು ಮಹಿಳೆಯರ ಹತ್ಯೆಯಾಗಿರಬೇಕು ಎಂದು ಶಂಕಿಸಲಾಗಿದೆ. ಚರ್ಮ ಕಪ್ಪು ಬಣ್ಣಕ್ಕೆ ತಿರುಗಿ ದೇಹ ಕೊಳೆಯಲು ಆರಂಭವಾಗಿದೆ ಎಂದು ಅವರು ವಿವರಿಸಿದ್ದಾರೆ. ದೇಹವನ್ನು ಬಾಬು ಜಗಜ್ಜೀವನರಾಂ ಸ್ಮಾರಕ ಆಸ್ಪತ್ರೆಗೆ ಒಯ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News