ಕೇರಳ 'ಆಯುಷ್ಮಾನ್ ಭಾರತ್' ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ ಎಂದು ಪ್ರಧಾನಿ ಸುಳ್ಳು ಹೇಳಿದರೇ?

Update: 2019-06-09 10:28 GMT

ತಿರುವನಂತಪುರ, ಜೂ.9: ಕೇಂದ್ರ  ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳ ರಾಜ್ಯ ಅನುಷ್ಠಾನಗೊಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟೀಕಿಸಿರುವ ಬಗ್ಗೆ ಕೇರಳ ಆರೋಗ್ಯ ಸಚಿವೆ ಕೆ.ಎಲ್.ಶೈಲಜಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇರಳ ಭೇಟಿ ವೇಳೆ ಪ್ರಧಾನಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೇರಳ ಸರ್ಕಾರವನ್ನು ಟೀಕಿಸಿದ್ದರು.

ಈ ವಿಚಾರದಲ್ಲಿ ಪ್ರಧಾನಿಗೆ ತಪ್ಪುಮಾಹಿತಿ ಇದ್ದಂತಿದೆ ಎಂದು ಶೈಲಜಾ ಹೇಳಿದ್ದಾರೆ. "ಕೇರಳ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸೇರಿದೆ. 2018ರ ನವೆಂಬರ್ 2ರಂದು ಈ ಸಂಬಂಧ ಒಡಂಬಡಿಕೆ ಮಾಡಿಕೊಲ್ಳಾಗಿದೆ. ಕೇರಳ ರಾಜ್ಯದ ಜನತೆ ಯೋಜನೆಯ ಪ್ರಯೋಜನ ಪಡೆಯುವುದನ್ನು ಖಾತ್ರಿಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಯೋಜನೆಯಡಿ ಮೊದಲ ಕಂತಿನ ಅನುದಾನ ಮಂಜೂರಾಗಿದೆ. ಬಹುಶಃ ಪ್ರಧಾನಿಗೆ ತಪ್ಪುಮಾಹಿತಿ ಇದ್ದಂತಿದೆ" ಎಂದು ಹೇಳಿದ್ದಾರೆ. ಮೋದಿ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳದಲ್ಲಿ ಈ ಯೋಜನೆಯನ್ನು ಕಾರುಣ್ಯ ಹೆಲ್ತ್ ಸ್ಕೀಂ ಹೆಸರಿನಲ್ಲಿ ಏಪ್ರಿಲ್ 1ರಂದು ಜಾರಿಗೊಳಿಸಲಾಗಿದೆ. 17 ಲಕ್ಷ ಮಂದಿ ಇದರಡಿ ಹೆಸರು ನೊಂದಾಯಿಸಿಕೊಂಡಿದ್ದು, 1.45 ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News