ವಿಶ್ವಕಪ್: 3ನೇ ಶತಕ ದಾಖಲಿಸಿದ ಧವನ್

Update: 2019-06-09 18:38 GMT

ಲಂಡನ್, ಜೂ.9: ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ ಆಸ್ಟ್ರೇಲಿಯ ವಿರುದ್ಧ ರವಿವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ 17ನೇ ಏಕದಿನ ಅಂತರ್‌ರಾಷ್ಟ್ರೀಯ ಶತಕ ಸಿಡಿಸಿದರು. ಇದು ಅವರು ವಿಶ್ವಕಪ್‌ನಲ್ಲಿ ಗಳಿಸಿದ ಮೂರನೇ ಶತಕವಾಗಿದೆ.

ಧವನ್ ಮೂರಂಕೆ ಗಳಿಸುವ ಮೂಲಕ ಭಾರತ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಶತಕ (27)ದಾಖಲಿಸಿದ ಮೊದಲ ತಂಡ ಎನಿಸಿಕೊಂಡಿತು. ಆಸ್ಟ್ರೇಲಿಯ(26) ಹಾಗೂ ಶ್ರೀಲಂಕಾ(23) ಆ ನಂತರದ ಸ್ಥಾನದಲ್ಲಿವೆ.

33ನೇ ಓವರ್‌ನಲ್ಲಿ ಮಾರ್ಕಸ್ ಸ್ಟೋನಿಸ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುವುದರೊಂದಿಗೆ ಧವನ್ ಶತಕ ಪೂರೈಸಿದರು. ಈ ಶತಕದ ಮೂಲಕ ಧವನ್ ವಿಶ್ವಕಪ್‌ನಲ್ಲಿ ತಲಾ ಮೂರು ಶತಕಗಳನ್ನು ಗಳಿಸಿರುವ ಪಾಕಿಸ್ತಾನದ ರಮೀಝ್ ರಾಜಾ, ಆಸ್ಟ್ರೇಲಿಯದ ಮ್ಯಾಥ್ಯೂ ಹೇಡನ್, ವೆಸ್ಟ್‌ಇಂಡೀಸ್‌ನ ವಿವಿಯನ್ ರಿಚಡ್ಸ್‌ರ್ , ಪಾಕಿಸ್ತಾನದ ಸಯೀದ್ ಅನ್ವರ್ ಹಾಗೂ ಶ್ರೀಲಂಕಾದ ಸನತ್ ಜಯಸೂರ್ಯ ಕ್ಲಬ್‌ಗೆ ಸೇರ್ಪಡೆಯಾದರು.

ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ವಿಶ್ವಕಪ್‌ನಲ್ಲಿ ಗರಿಷ್ಠ ಶತಕ(6)ದಾಖಲಿಸಿದ ದಾಖಲೆ ನಿರ್ಮಿಸಿದ್ದಾರೆ. ತಲಾ 5 ಶತಕಗಳನ್ನು ಗಳಿಸಿರುವ ಶ್ರೀಲಂಕಾದ ಕುಮಾರ ಸಂಗಕ್ಕರ ಹಾಗೂ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಭಾರತದ ಸೌರವ್ ಗಂಗುಲಿ ಹಾಗೂ ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್ ಸಹಿತ ಐವರು ಕ್ರಿಕೆಟಿಗರು ವಿಶ್ವಕಪ್‌ನಲ್ಲಿ ತಲಾ 4 ಶತಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News