ಸೆಪ್ಟೆಂಬರ್‌ನಲ್ಲಿ ಮೊದಲ ರಫೇಲ್ ಯುದ್ಧವಿಮಾನ ಪೂರೈಕೆ: ಫ್ರಾನ್ಸ್ ಸಚಿವ

Update: 2019-06-10 17:48 GMT

ಹೊಸದಿಲ್ಲಿ, ಜೂ.10: ಮೊದಲ ರಫೇಲ್ ಯುದ್ಧವಿಮಾನ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಇಳಿಯಲಿದೆ ಮತ್ತು ಇದು ಭಾರತ-ಫ್ರಾನ್ಸ್ ನಡುವಿನ ಸಹಕಾರದ ದೃಢ ಸೂಚನೆಯಾಗಲಿದೆ. ಆನಂತರ ಒಂದರ ಮೇಲೊಂದರಂತೆ 35 ರೆಫೇಲ್ ಯುದ್ಧವಿಮಾನಗಳನ್ನು ಭಾರತಕ್ಕೆ ಪೂರೈಕೆ ಮಾಡಲಾಗುವುದು ಎಂದು ಫ್ರಾನ್ಸ್‌ನ ಯೂರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜಾನ್ ಬ್ಯಾಪ್ಟಿಸ್ಟ ಲೆಮೊನೆ ಸೋಮವಾರ ತಿಳಿಸಿದ್ದಾರೆ.

ರಫೇಲ್ ಒಪ್ಪಂದದ ಬಗ್ಗೆ ಉಂಟಾಗಿರುವ ವಿವಾದದ ಕುರಿತು ಮಾತನಾಡಿದ ಸಚಿವರು, ಫ್ರೆಂಚ್ ಸರಕಾರ ವಿವಾದಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ನಮಗೆ ನಮ್ಮದೇ ಆದ ಯೋಜನೆಯಿದ್ದು ಅದರಂತೆ ನಾವು ಯುದ್ದವಿಮಾನ ಪೂರೈಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಉಗ್ರವಾದ ತಡೆಯಲು ಜಾಗತಿಕ ಮಟ್ಟದಲ್ಲಿ ಸಭೆ ನಡೆಸಬೇಕು ಎಂಬ ಪ್ರಧಾನಿ ಮೋದಿಯವರ ಪ್ರಸ್ತಾವವನ್ನು ಸ್ವಾಗತಿಸಿದ ಲೆಮೊನ್, ಉಗ್ರವಾದದ ವಿರುದ್ಧ ಹೋರಾಟ ಫ್ರಾನ್ಸ್‌ನ ಆದ್ಯತೆಗಳ ಪೈಕಿ ಒಂದಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News