ಭ್ರಷ್ಟಾಚಾರ ಆರೋಪ: ಪಾಕ್ ಮಾಜಿ ಅಧ್ಯಕ್ಷ ಝರ್ದಾರಿ ಬಂಧನ

Update: 2019-06-10 18:25 GMT

ಇಸ್ಲಾಮಾಬಾದ್, ಜೂ. 10: ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿಯನ್ನು ಸೋಮವಾರ ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿದೆ ಎಂದು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ವಕ್ತಾರ ನವಾಝಿಶ್ ಅಲಿಯನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಝರ್ದಾರಿಯ ನಕಲಿ ಬ್ಯಾಂಕ್ ಖಾತೆಗಳು ಮತ್ತು ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಚಾನೆಲ್‌ಗಳು ಹೇಳಿವೆ.

ಹತ್ಯೆಯಾಗಿರುವ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೊ ಅವರ ಗಂಡನಾಗಿರುವ ಝರ್ದಾರಿ, 2008ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಭ್ರಷ್ಟಾಚಾರ ಮತ್ತು ಕೊಲೆ ಆರೋಪಗಳಲ್ಲಿ ಅವರು 11 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು. ಅವರು 2008ರಿಂದ 2013ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.

ಯಾವುದೇ ಪ್ರಕರಣದಲ್ಲಿ ಅವರು ಈವರೆಗೆ ದೋಷಿಯಾಗಿಲ್ಲ.

ಝರ್ದಾರಿ ಮತ್ತು ಅವರ ಸಹೋದರಿ ಫರ್ಯಾಲ್ ತಾಲ್ಪುರ್‌ರ ಜಾಮೀನನ್ನು ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿದ ಗಂಟೆಗಳ ಬಳಿಕ ಅವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News