737 ಮ್ಯಾಕ್ಸ್ ನಿಷೇಧ ಸೆ. 3ರವರೆಗೆ ವಿಸ್ತರಿಸಿದ ಅಮೆರಿಕನ್ ಏರ್‌ಲೈನ್ಸ್

Update: 2019-06-10 17:50 GMT

ವಾಶಿಂಗ್ಟನ್, ಜೂ. 10: ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್ ಮಾದರಿಯ ವಿಮಾನದ ಮೇಲಿನ ನಿಷೇಧವನ್ನು ಸೆಪ್ಟಂಬರ್ 3ರವರೆಗೆ ವಿಸ್ತರಿಸಿರುವುದಾಗಿ ಅಮೆರಿಕನ್ ಏರ್‌ಲೈನ್ಸ್ ವಿಮಾನಯಾನ ಕಂಪೆನಿ ರವಿವಾರ ಘೋಷಿಸಿದೆ.

ಇಂಡೋನೇಶ್ಯದ ಲಯನ್ ಏರ್ ಮತ್ತು ಇಥಿಯೋಪಿಯದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ ಮಾದರಿಯ ವಿಮಾನಗಳು ಪತನಗೊಂಡಿರುವ ಹಿನ್ನೆಲೆಯಲ್ಲಿ, ಜಾಗತಿಕ ವಿಮಾನಯಾನ ಸಂಸ್ಥೆಗಳು ಸುಮಾರು 3 ತಿಂಗಳಿನಿಂದ ಈ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿವೆ.

ವಿಮಾನ ಅಪಘಾತಗಳಿಗೆ ವಿಮಾನದ ದೋಷಪೂರಿತ ಸಾಫ್ಟ್‌ವೇರ್ ಕಾರಣ ಎಂದು ಹೇಳಲಾಗಿದೆ. ಅವಳಿ ವಿಮಾನ ಅಪಘಾತಗಳಲ್ಲಿ ಒಟ್ಟು 346 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನಿಷೇಧ ವಿಸ್ತರಣೆಯಿಂದಾಗಿ ಪ್ರತಿ ದಿನ 115 ಹಾರಾಟಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಮೆರಿಕನ್ ಏರ್‌ಲೈನ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News