ಅಮಿತಾಬ್ ಬಚ್ಚನ್ ಟ್ವಿಟ್ಟರ್ ಖಾತೆಗೆ ಕನ್ನ ಹಾಕಿದ ಹ್ಯಾಕರ್‌ಗಳು ಮಾಡಿದ್ದೇನು ಗೊತ್ತೇ ?

Update: 2019-06-11 04:00 GMT

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಅವರ ಪ್ರೊಫೈಲ್ ಚಿತ್ರದ ಬದಲಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಭಾವಚಿತ್ರ ಹಾಕಿದ್ದಾರೆ.

ಇಷ್ಟಲ್ಲದೇ ಈ ಖಾತೆಯಿಂದ "ಇದು ಇಡೀ ವಿಶ್ವಕ್ಕೆ ಮಹತ್ವದ ಸಂದೇಶ ! ಟರ್ಕಿ ಫುಟ್‌ಬಾಲ್ ಆಟಗಾರರ ಬಗೆಗಿನ ಐಸ್‌ಲ್ಯಾಂಡ್ ನಡವಳಿಕೆಯನ್ನು ನಾವು ಖಂಡಿಸುತ್ತೇವೆ. ನಾವು ಮೆದುವಾಗಿ ಮಾತನಾಡುತ್ತೇವೆ; ಆದರೆ ದೊಣ್ಣೆ ಹಿಡಿದಿದ್ದೇವೆ ಹಾಗೂ ದೊಡ್ಡ ಸೈಬರ್ ದಾಳಿಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

"ಈ ಸಂಬಂಧ ನಮ್ಮ ಸೈಬರ್ ಘಟಕ ಮತ್ತು ಮಹಾರಾಷ್ಟ್ರ ಸೈಬರ್ ಘಟಕಕ್ಕೆ ಅಮಿತಾಬ್ ಬಚ್ಚನ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದೇವೆ. ತನಿಖೆ ನಡೆಯುತ್ತಿದ್ದು, ವಿವರ ನಿರೀಕ್ಷಿಸಲಾಗಿದೆ" ಎಂದು ಮುಂಬೈ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಭಾರತ ವಿರೋಧಿ ಹೇಳಿಕೆಯನ್ನೂ ಟ್ವೀಟ್ ಮಾಡಿರುವ ಹ್ಯಾಕರ್‌ಗಳು, "ಭಾರತ ಮುಸ್ಲಿಮರ ಮೇಲೆ ರಮಝಾನ್ ತಿಂಗಳಲ್ಲಿ ಉಪವಾಸ ನಿರತರ ಮೇಲೆ ನಿರ್ದಯವಾಗಿ ದಾಳಿ ಮಾಡುತ್ತಿದೆ. ಈ ಮೂಲಕ ಉಮ್ಮಾ ಮೊಹ್ಮದ್ ಮೇಲೆ ಈ ಯುಗದಲ್ಲಿ ದಾಳಿ ನಡೆಯುತ್ತಿದೆ. ಭಾರತೀಯ ಮುಸ್ಲಿಮರು ಅಬ್ದುಲ್‌ ಹಮೀದ್ ಮೂಲಕ ನಮಗೆ ಕಾರ್ಯ ವಹಿಸಿದ್ದಾರೆ" ಎಂದಿದ್ದಾರೆ.

ಬಚ್ಚನ್ ಟ್ವಿಟ್ಟರ್‌ನಲ್ಲಿ 40 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಇದೀಗ ಬಚ್ಚನ್ ಅವರ ಖಾತೆಯನ್ನು ಪುನಃಸ್ಥಾಪಿಸಿದ್ದರೂ, ಪ್ರೊಫೈಲ್ ಚಿತ್ರ ಮಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News