ಚೀನಾದಲ್ಲಿ ಭಾರೀ ಮಳೆ: 5 ಸಾವು

Update: 2019-06-11 17:24 GMT

ಶಾಂಘೈ (ಚೀನಾ), ಜೂ. 11: ಮಧ್ಯ ಮತ್ತು ದಕ್ಷಿಣ ಚೀನಾದಾದ್ಯಂತ ಜಡಿಮಳೆ ಸುರಿಯುತ್ತಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದಾಗಿ ಸರಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಜಿಯಾಂಗ್‌ಕ್ಸಿ ಪ್ರಾಂತದಲ್ಲಿ ಸೋಮವಾರದ ವೇಳೆಗೆ ಪ್ರವಾಹದಿಂದಾಗಿ 10,800 ಹೆಕ್ಟೇರ್ ಬೆಳೆ ನಾಶವಾಗಿದೆ ಹಾಗೂ ನೂರಾರು ಮನೆಗಳು ಕುಸಿದಿವೆ ಎಂದು ಚೀನಾದ ಅಧಿಕೃತ ಪತ್ರಿಕೆ ‘ಚೀನಾ ಡೇಲಿ’ ಹೇಳಿದೆ. ಭೀಕರ ಮಳೆಯಿಂದಾಗಿ 14 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದು, 2.65 ಬಿಲಿಯ ಯವಾನ್ (ಸುಮಾರು 2,650 ಕೋಟಿ ರೂಪಾಯಿ) ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಗುವಾಂಗ್‌ಕ್ಸಿ ವಲಯದಲ್ಲಿ 20,000ಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಹಾಗೂ ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News