ತೈಸೆಂಕ್ರಪ್-ಟಾಟಾ ಸ್ಟೀಲ್ ವಿಲೀನಕ್ಕೆ ಐರೋಪ್ಯ ಒಕ್ಕೂಟ ತಡೆ

Update: 2019-06-11 17:27 GMT

ಬ್ರಸೆಲ್ಸ್ (ಬೆಲ್ಜಿಯಮ್), ಜೂ. 11: ಜರ್ಮನಿಯ ಕೈಗಾರಿಕಾ ಸಮೂಹ ತೈಸೆಂಕ್ರಪ್ ಉಕ್ಕು ಉದ್ದಿಮೆಯ ದೈತ್ಯ ಟಾಟಾ ಸ್ಟೀಲ್ ಜೊತೆ ವಿಲೀನಗೊಳ್ಳುವುದಕ್ಕೆ ಐರೋಪ್ಯ ಒಕ್ಕೂಟದ ಪ್ರಭಾವಿ ಆ್ಯಂಟಿ-ಟ್ರಸ್ಟ್ ಪ್ರಾಧಿಕಾರ ಮಂಗಳವಾರ ತಡೆ ಹೇರಿದೆ.

 ‘‘ಐರೋಪ್ಯ ಕೈಗಾರಿಕಾ ಬಳಕೆದಾರರಿಗೆ ಗಂಭೀರ ಹಾನಿಯಾಗುವುದನ್ನು ತಪ್ಪಿಸಲು ನಾವು ವಿಲೀನಕ್ಕೆ ತಡೆ ಹಾಕಿದ್ದೇವೆ’’ ಎಂದು ಐರೋಪ್ಯ ಒಕ್ಕೂಟದ ಕಾಂಪಿಟೀಶನ್ ಕಮಿಶನರ್ ಮಾರ್ಗರೆಟ್ ವೆಸ್ಟಾಜರ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ವಿಲೀನದ ಉದ್ದೇಶ ಬಹುರಾಷ್ಟ್ರೀಯ ಉಕ್ಕು ದೈತ್ಯ ಏರ್ಸಲರ್‌ಮಿತ್ತಲ್ ಬಳಿಕ ಯುರೋಪ್‌ನ ಎರಡನೇ ಅತಿ ದೊಡ್ಡ ಉಕ್ಕು ಕಂಪೆನಿಯಾಗುವುದು ಹಾಗೂ ಚೀನಾದ ಬೆಳೆಯುತ್ತಿರುವ ಉಕ್ಕು ಉದ್ಯಮಕ್ಕೆ ಸ್ಪರ್ಧೆ ನೀಡುವುದಾಗಿತ್ತು.

ವಿಲೀನವು ಸ್ಪರ್ಧೆಯನ್ನು ಕಡಿತಗೊಳಿಸುತ್ತದೆ ಹಾಗೂ ವಿವಿಧ ರೀತಿಯ ಉಕ್ಕುಗಳ ಬೆಲೆಯನ್ನು ಹೆಚ್ಚಿಸುತ್ತದೆ ಎಂಬುದಾಗಿ ಕಾಂಪಿಟೀಶನ್ ಕಮಿಶನ್ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News