ಸೌದಿ: 10ನೇ ವಯಸ್ಸಿನಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವಕನಿಗೆ ಮರಣದಂಡನೆ

Update: 2019-06-11 17:33 GMT

ಹೊಸದಿಲ್ಲಿ, ಜೂ.11: ತನ್ನ ಹತ್ತನೇ ಹರೆಯದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕನಿಗೆ ಸೌದಿ ಅರೇಬಿಯ ಮರಣ ದಂಡನೆ ವಿಧಿಸಿದೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

 ಸದ್ಯ 18 ವರ್ಷದವನಾಗಿರುವ ಮುರ್ತಝ ಖುರೆರಿಸ್ ಸೌದಿ ಅರೇಬಿಯದ ಶಿಯಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದಾನೆ. 10 ವರ್ಷ ಪ್ರಾಯದಲ್ಲಿ ಮಾಡಿದ ತಪ್ಪಿಗೆ 13ನೇ ವರ್ಷದಲ್ಲಿ ಬಂಧಿತನಾದ ಮುರ್ತಜ 2014ರಿಂದ ಜೈಲಿನಲ್ಲೇ ದಿನ ಕಳೆದಿದ್ದಾನೆ ಎಂದು ವರದಿ ತಿಳಿಸಿದೆ.

 ಆಮ್ನೆಸ್ಟಿ ಅಂತರ್‌ರಾಷ್ಟ್ರೀಯದ ಪ್ರಕಾರ, ಮುರ್ಝ, ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ, 2011ರಲ್ಲಿ ಪ್ರತಿಭಟನೆಯ ವೇಳೆ ಹತ್ಯೆಗೈಯಲ್ಪಟ್ಟ ಸಹೋದರ ಅಲಿ ಖುರೆರಿಸ್‌ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ, ಉಗ್ರ ಸಂಘಟನೆ ಸೇರಿದ, ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ಮತ್ತು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ ಆರೋಪದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News