ನೂತನ ಪ್ರಧಾನಿ ಆಯ್ಕೆಯು ಬ್ರೆಕ್ಸಿಟ್ ಬದಲಿಸದು: ಐರೋಪ್ಯ ಕಮಿಶನ್

Update: 2019-06-11 18:00 GMT

  ಬ್ರಸೆಲ್ಸ್ (ಬೆಲ್ಜಿಯಮ್), ಜೂ. 11: ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್‌ನ ನಿರ್ಗಮನ ಪ್ರಧಾನಿ ತೆರೇಸಾ ಮೇ ನಡುವೆ ಏರ್ಪಟ್ಟಿರುವ ಬ್ರೆಕ್ಸಿಟ್ ಒಪ್ಪಂದವು ನೂತನ ಬ್ರಿಟಿಶ್ ಪ್ರಧಾನಿಯ ಆಯ್ಕೆ ಬಳಿಕ ಬದಲಾಗುವುದಿಲ್ಲ ಎಂದು ಐರೋಪ್ಯ ಕಮಿಶನ್‌ನ ವಕ್ತಾರರೊಬ್ಬರು ಮಂಗಳವಾರ ಹೇಳಿದ್ದಾರೆ.

ಐರೋಪ್ಯ ಒಕ್ಕೂಟದ ಬಜೆಟ್‌ಗೆ ನೀಡಬೇಕಾಗಿರುವ ಬಿಲಿಯಗಟ್ಟಳೆ ಯುರೋ ಹಣವನ್ನು ತಡೆಯುವುದಾಗಿ ಸಂಭಾವ್ಯ ನೂತನ ಪ್ರಧಾನಿಯೆಂಬುದಾಗಿ ಭಾವಿಸಲಾಗಿರುವ ಬೊರಿಸ್ ಜಾನ್ಸನ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ವಕ್ತಾರ, ‘‘ನಮ್ಮೆದುರು ಇರುವ ಒ್ಪಪಂದ ಏನು ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನು ಎಲ್ಲ ಸದಸ್ಯ ದೇಶಗಳು ಅಂಗೀಕರಿಸಿವೆ. ನೂತನ ಪ್ರಧಾನಿಯ ಆಯ್ಕೆಯು ಮಾನದಂಡಗಳನ್ನು ಬದಲಿಸುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News