ಸ್ವದೇಶಕ್ಕೆಮಾಲಿಂಗ ವಾಪಸ್

Update: 2019-06-11 18:49 GMT

ಲಂಡನ್, ಜೂ.11: ಬಾಂಗ್ಲಾದೇಶ ವಿರುದ್ಧ ಮಂಗಳವಾರ ವಿಶ್ವಕಪ್ ಪಂದ್ಯ ಕೊನೆಗೊಂಡ ತಕ್ಷಣ ತನ್ನ ಅತ್ತೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಶನಿವಾರ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಪಂದ್ಯಕ್ಕಿಂತ ಮೊದಲು ಮಾಲಿಂಗ ತಂಡ ಸೇರಿಕೊಳ್ಳಲಿದ್ದಾರೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ. ಕೊಲಂಬೊದಲ್ಲಿ ಗುರುವಾರ ನಡೆಯುವ ತನ್ನ ಅತ್ತೆ ಕಾಂತಿ ಪೆರೇರ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಾಂಗ್ಲಾದೇಶ ವಿರುದ್ಧ ಬ್ರಿಸ್ಟಾಲ್‌ನಲ್ಲಿ ನಡೆಯುವ ವಿಶ್ವಕಪ್ ಪಂದ್ಯದ ಬಳಿಕ ಮಾಲಿಂಗ ಸ್ವದೇಶಕ್ಕೆ ತೆರಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

‘‘ಜೂ.15 ರಂದು ನಡೆಯುವ ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಪಂದ್ಯಕ್ಕಿಂತ ಮೊದಲು 35ರ ಹರೆಯದ ವೇಗದ ಬೌಲರ್ ಮಾಲಿಂಗ ತಂಡವನ್ನು ಸೇರಿಕೊಳ್ಳುವ ವಿಶ್ವಾಸವಿದೆ’’ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News