ಝರ್ದಾರಿಗೆ 11 ದಿನಗಳ ನ್ಯಾಯಾಂಗ ಬಂಧನ
Update: 2019-06-12 23:09 IST
ಇಸ್ಲಾಮಾಬಾದ್, ಜೂ. 12: ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿಯನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಮಂಗಳವಾರ 11 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಅವರನ್ನು ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ಸೋಮವಾರ ಬಂಧಿಸಲಾಗಿತ್ತು.
ಅವರನ್ನು ಮಂಗಳವಾರ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಅರ್ಶದ್ ಮಲಿಕ್ ಎದುರು ಹಾಜರುಪಡಿಸಿದಾಗ, ಅವರು ಝರ್ದಾರಿಗೆ 11 ದಿನಗಳ ನ್ಯಾಯಾಂಗ ಬಂಧವನ್ನು ವಿಧಿಸಿದರು.
ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ಮೊತ್ತವನ್ನು ಬಿಳುಪುಗೊಳಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ಬ್ಯೂರೋದ ಪ್ರಾಸಿಕ್ಯೂಟರ್ ಮುಝಫರ್ ಅಬ್ಬಾಸಿ ನ್ಯಾಯಾಲಯದಲ್ಲಿ ಹೇಳಿದರು.