ಪಾಕಿಸ್ತಾನವನ್ನು ಸಾಲದ ಸುಳಿಗೆ ಸಿಲುಕಿಸಿದವರ ಬೆನ್ನು ಬೀಳುವೆ: ಇಮ್ರಾನ್ ಖಾನ್

Update: 2019-06-12 17:46 GMT

ಇಸ್ಲಾಮಾಬಾದ್, ಜೂ. 12: ದೇಶವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ ‘ಕಳ್ಳರ’ ಬೆನ್ನು ಬೀಳುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಣತೊಟ್ಟಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಪಡೆದ ಭಾರೀ ಸಾಲಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಅವರು ಉನ್ನತಾಧಿಕಾರದ ಆಯೋಗವೊಂದನ್ನು ರಚಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ತನ್ನ ಸರಕಾರದ ಮೊದಲ ಬಜೆಟ್ ಮಂಡಿಸಿದ ಬಳಿಕ, ಮಂಗಳವಾರ ಮಧ್ಯರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್, ಸಾಲದ ಕಾರಣದಿಂದಾಗಿ ಎಲ್ಲ ಆರ್ಥಿಕ ಸಮಸ್ಯೆಗಳು ಹುಟ್ಟಿಕೊಂಡಿವೆ ಎಂದು ಹೇಳಿದರು.

ಪಂಜಾಬ್ ವಿಧಾನಸಭೆಯ ಪ್ರತಿಪಕ್ಷ ನಾಯಕ ಹಂಝ ಶೆಹಬಾಝ್‌ರನ್ನು ಕಪ್ಪುಹಣ ಬಿಳುಪು ಮಾಡಿದ ಪ್ರಕರಣದಲ್ಲಿ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಬಂಧಿಸಿದ ದಿನವೇ ಇಮ್ರಾನ್ ಭಾಷಣ ಮಾಡಿದ್ದಾರೆ.

ಸೋಮವಾರ ದೇಶದ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿಯನ್ನು ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ಇದೇ ಸಂಸ್ಥೆ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News