ಎಸ್ ಸಿಒ ಶೃಂಗಸಭೆ: ಪಾಕ್ ಪ್ರಧಾನಿಯಿಂದ ಶಿಷ್ಟಾಚಾರ ಉಲ್ಲಂಘನೆ

Update: 2019-06-14 08:59 GMT

ಬಿಷ್ಕೆಕ್, ಜೂ.14: ಕಿರ್ಗಿಸ್ತಾನದ ಬಿಷ್ಕೆಕ್ ನಡೆಯುತ್ತಿರುವ  ಎಸ್ ಸಿಒ ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.

ಶೃಂಗಸಭೆಗೆ ವಿವಿಧ ದೇಶಗಳ ನಾಯಕರು ಆಗಮಿಸುವ ವೇಳೆ ಇಮ್ರಾನ್ ಖಾನ್ ಎದ್ದು ನಿಂತು ಗೌರವ ಸೂಚಿಸಲಿಲ್ಲ. ಈ ವೇಳೆ ಇಮ್ರಾನ್ ಖಾನ್ ಕುರ್ಚಿಯಲ್ಲಿ ಕುಳಿತುಕೊಂಡೇ ಇದ್ದರು. ಎಲ್ಲರೂ ನಿಂತಿರುವುದನ್ನು ಗಮನಿಸಿದ ಇಮ್ರಾನ್ ಖಾನ್ ತಡವಾಗಿ ಕುರ್ಚಿಯಿಂದ ಎದ್ದು ನಿಂತುಕೊಂಡಿದ್ದಾರೆ.

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್  ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಸೌದಿ ಅರೇಬಿಯಾದಲ್ಲಿ ನಡೆದ ಒಐಸಿ ಸಮ್ಮೇಳನದಲ್ಲೂ ಇಮ್ರಾನ್ ಖಾನ್ ಶಿಷ್ಟಾಚಾರ ಉಲ್ಲಂಘಿಸಿರುವುದು ಕಂಡು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News