ಕೊಲ್ಲಿಯಲ್ಲಿ ಬೃಹತ್ ಸಂಘರ್ಷವನ್ನು ಜಗತ್ತು ತಾಳಿಕೊಳ್ಳದು: ವಿಶ್ವಸಂಸ್ಥೆ ಮಹಾಕಾರ್ಯದರ್ಶಿ

Update: 2019-06-14 17:04 GMT

ವಿಶ್ವಸಂಸ್ಥೆ, ಜೂ. 14: ಅರೇಬಿಯನ್ ಕೊಲ್ಲಿಯಲ್ಲಿ ಇನ್ನೊಂದು ಬೃಹತ್ ಸಂಘರ್ಷವನ್ನು ಜಗತ್ತು ತಾಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಗುರುವಾರ ಎಚ್ಚರಿಸಿದ್ದಾರೆ.

ಒಮಾನ್ ಸಮುದ್ರದಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ನಡೆದಿದೆಯೆನ್ನಲಾದ ದಾಳಿಗಳ ಹಿನ್ನೆಲೆಯಲ್ಲಿ, ಇರಾನ್ ಮತ್ತು ಅಮೆರಿಕಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ಹೇಳಿಕೆ ನೀಡಿದ್ದಾರೆ.

‘‘ನಾಗರಿಕ ಹಡಗುಗಳ ಮೇಲಿನ ಯಾವುದೇ ದಾಳಿಯನ್ನು ನಾನು ಖಂಡಿಸುತ್ತೇನೆ’’ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಗುಟೆರಸ್ ‘ಅರಬ್ ಲೀಗ್ ಜೊತೆಗಿನ ವಿಶ್ವಸಂಸ್ಥೆ ಸಹಕಾರ’ ಕುರಿತ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದರು.

 ‘‘ಸತ್ಯ ಸಂಗತಿಗಳು ಹೊರಬರಬೇಕು ಹಾಗೂ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಕೊಲ್ಲಿಯ ವಲಯದಲ್ಲಿ ಬೃಹತ್ ಸಂಘರ್ಷವೊಂದನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿ ಜಗತ್ತು ಇಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News