ವಿಶ್ವಕಪ್: ಫಿಂಚ್ ಶತಕದ ಪಂಚ್; ಶ್ರೀಲಂಕಾಕ್ಕೆ 335 ರನ್ ಗುರಿ

Update: 2019-06-15 13:19 GMT

ಲಂಡನ್, ಜೂ.15: ನಾಯಕ ಆ್ಯರೊನ್ ಫಿಂಚ್‌ರ ಶತಕದ ಪಂಚ್(153, 132 ಎಸೆತ)ಸಹಾಯದಿಂದ ಆಸ್ಟ್ರೇಲಿಯ ತಂಡ ಶ್ರೀಲಂಕಾ ತಂಡಕ್ಕೆ ವಿಶ್ವಕಪ್‌ನ 20ನೇ ಪಂದ್ಯದ ಗೆಲುವಿಗೆ 335 ರನ್ ಗುರಿ ನೀಡಿದೆ.

ಶನಿವಾರ ಇಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(26) ಹಾಗೂ ಫಿಂಚ್(153,132 ಎಸೆತ, 15 ಬೌಂಡರಿ, 5 ಸಿಕ್ಸರ್)ಮೊದಲ ವಿಕೆಟ್‌ಗೆ 80 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.

ವಾರ್ನರ್ ಹಾಗೂ ಖ್ವಾಜಾ ಔಟಾದಾಗ ಜೊತೆಯಾದ ಫಿಂಚ್ ಹಾಗೂ ಸ್ಮಿತ್(73, 59 ಎಸೆತ, 7 ಬೌಂಡರಿ, 1 ಸಿಕ್ಸರ್) ಮೂರನೇ ವಿಕೆಟ್‌ಗೆ 173 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 273ಕ್ಕೆ ತಲುಪಿಸಿದರು.

97 ಎಸೆತಗಳಲ್ಲಿ 14ನೇ ಶತಕ ಪೂರೈಸಿದ ಫಿಂಚ್ 42.4ನೇ ಓವರ್‌ನಲ್ಲಿ ಔಟಾಗುವ ಮೊದಲು 153 ರನ್ ಗಳಿಸಿದರು. ಸ್ಮಿತ್ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಲಂಕೆಯ ಪರ ಉದಾನ(2-57) ಹಾಗೂ ಧನಂಜಯ ಸಿಲ್ವಾ(2-40)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News