​ಅಮೆರಿಕ: ಭಾರತೀಯ ಕುಟುಂಬದ ನಾಲ್ವರ ಹತ್ಯೆ

Update: 2019-06-17 04:13 GMT

ಲೋವಾ: ಇಬ್ಬರು ಮಕ್ಕಳು ಸೇರಿದಂತೆ ಭಾರತ ಮೂಲದ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಮನೆಯೊಳಗೆಯೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ವೆಸ್ಟ್ ಡೆಸ್‌ಮೊನೆಸ್‌ನಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ಚಂದ್ರಶೇಖರ ಸುಂಕರ (44), ಲಾವಣ್ಯ ಸುಂಕರ (41) ಎಂದು ಗುರುತಿಸಲಾಗಿದೆ. ಈ ದಂಪತಿಯ 15 ಮತ್ತು 10 ವರ್ಷದ ಇಬ್ಬರು ಮಕ್ಕಳು ಗುಂಡಿಗೆ ಬಲಿಯಾಗಿದ್ದಾರೆ. ಬಲಿಯಾದವರ ದೇಹದಲ್ಲಿ ಹಲವು ಗುಂಡುಗಳು ಕಂಡುಬಂದಿವೆ.

ಈ ಮನೆಯಲ್ಲಿ ವಾಸವಿದ್ದ ಅತಿಥಿಗಳು ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಸಾಧ್ಯವಾದಷ್ಟೂ ಮಟ್ಟಿಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವವರೆಗೂ ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸ್ ಇಲಾಖೆಯ ಸಾರ್ಜೆಂಟ್ ಡಾನ್ ವಾಡ್ ಹೇಳಿಕೆ ನೀಡಿದ್ದಾರೆ.

ಈ ಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News