ಮೆಕ್ಸಿಕೊದಲ್ಲಿ 791 ಅಮೆರಿಕಕ್ಕೆ ಹೋಗುವ ವಲಸಿಗರ ಬಂಧನ

Update: 2019-06-17 17:57 GMT

ಮೆಕ್ಸಿಕೊ ಸಿಟಿ, ಜೂ. 17: ಮಧ್ಯ ಅಮೆರಿಕದ 791 ವಲಸಿಗರನ್ನು ಮೆಕ್ಸಿಕೊದ ರಾಜ್ಯ ವೆರಾಕ್ರುಝ್‌ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಈ ಪೈಕಿ 368 ಮಂದಿ 8 ವರ್ಷಕ್ಕಿಂತ ಕೆಳಗಿನ ಮಕ್ಕಳು.

ವಲಸಿಗರನ್ನು ಎರಡು ಟ್ರೇಲರ್‌ಗಳಲ್ಲಿ ಅಡಗಿಸಿ ಸಾಗಿಸಲಾಗುತ್ತಿತ್ತು ಹಾಗೂ ಎರಡು ತಪಾಸಣಾ ಠಾಣೆಗಳಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ನ್ಯಾಶನಲ್ ಮೈಗ್ರೇಶನ್ ಇನ್‌ಸ್ಟಿಟ್ಯೂಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಂಧಿತರಲ್ಲಿ 413 ಗ್ವಾಟೆಮಾಲ ಪ್ರಜೆಗಳು, 330 ಹೊಂಡುರಸ್ ಪ್ರಜೆಗಳು ಮತ್ತು 39 ಮಂದಿ ಸಾಲ್ವಡೋರ್ ಪ್ರಜೆಗಳಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಅದೇ ವೇಳೆ, ಆರು ಮಂದಿ ಶಂಕಿತ ಮಾನವ ಕಳ್ಳಸಾಗಾಣಿಕೆದಾರರನ್ನೂ ಬಂಧಿಸಲಾಗಿದೆ.

ವೆರಾಕ್ರುಝ್ ಮೆಕ್ಸಿಕೊದ ಅತ್ಯಂತ ಹಿಂಸಾತ್ಮಕ ಪ್ರದೇಶಗಳ ಪೈಕಿ ಒಂದಾಗಿದೆ. ಅಮೆರಿಕಕ್ಕೆ ಹೋಗುವ ಮಾದಕ ದ್ಯವ್ಯ ಸಾಗಣೆ ಮಾರ್ಗಗಳು ಈ ರಾಜ್ಯದ ಮೂಲಕ ಹಾದುಹೋಗುತ್ತವೆ. ಇಲ್ಲಿಂದ ಹಾದುಹೋಗವ ವಲಸಿಗರು ದರೋಡೆ, ಅತ್ಯಾಚಾರ ಮತ್ತು ಅಪಹರಣಕ್ಕೊಳಗಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News