ಸೇನಾ ವಾಹನದ ಮೇಲೆ ದಾಳಿ: ಇಬ್ಬರು ಸೈನಿಕರು ಹುತಾತ್ಮ

Update: 2019-06-18 07:17 GMT

ಶ್ರೀನಗರ, ಜೂ.18: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸೋಮವಾರ ಉಗ್ರರು ಸೇನೆಯ ಶಸ್ತ್ರಸಜ್ಜಿತ ವಾಹನವೊಂದನ್ನು ಗುರಿಯಾಗಿರಿಸಿಕೊಂಡು ಸುಧಾರಿತ ಸ್ಫೋಟಕ ಸಾಧನ(ಐಇಡಿ)ಬಳಸಿ ನಡೆಸಿದ್ದ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರು ಯೋಧರು ಮಂಗಳವಾರ ಮೃತಪಟ್ಟಿದ್ದಾರೆ.

ಪುಲ್ವಾಮದ ಅರಿಹಾಲ್ ಗ್ರಾಮದ ಸಮೀಪ 44 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ ಕ್ಯಾಸ್ಪರ್ ವಾಹನದ ಮೇಲೆ ದಾಳಿ ನಡೆದಿದ್ದು, ವಾಹನಕ್ಕೆ ಹಾನಿಯಾಗಿತ್ತು. ಘಟನೆಯಲ್ಲಿ ಆರು ಸೈನಿಕರು ಹಾಗೂ ಇಬ್ಬರು ನಾಗರಿಕರಿಗೆ ಗಾಯವಾಗಿತ್ತು. ಇದೀಗ ಇಬ್ಬರು ಯೋಧರು ಗಂಭೀರ ಗಾಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಜಮ್ಮು-ಕಾಶ್ಮೀರದಲ್ಲಿ ಕಳೆದ 10 ದಿನಗಳಲ್ಲಿ ನಡೆದ ವಿಭಿನ್ನ ಘಟನೆಗಳಲ್ಲಿ 10 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಆರ್ಮಿಯ ಸೈನಿಕ ಇಂದು ಬೆಳಗ್ಗೆ ಅನಂತನಾಗ್‌ನಲ್ಲಿ ಹುತಾತ್ಮರಾಗಿದ್ದರು. ಆರ್ಮಿ ಮೇಜರ್ ಸೋಮವಾರ ಅನಂತನಾಗ್‌ನಲ್ಲಿ ಉಗ್ರರೊಂದಿಗಿನ ಎನ್‌ಕೌಂಟರ್ ವೇಳೆ ಪ್ರಾಣ ಕಳೆದುಕೊಂಡಿದ್ದರು.

 ಕಳೆದ ವಾರ ಅನಂತನಾಗ್‌ನಲ್ಲಿ ಉಗ್ರರು ಸಿಆರ್‌ಪಿಎಫ್ ಪಟ್ರೋಲ್ ಟೀಮ್ ಮೇಲೆ ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದರು. ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಪೊಲೀಸ್ ನಿರೀಕ್ಷಕರೊಬ್ಬರು ಬಳಿಕ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News