×
Ad

ಕಾಲುವೆಗೆ ಉರುಳಿದ ವಾಹನ: ಏಳು ಮಕ್ಕಳು ಮೃತಪಟ್ಟಿರುವ ಶಂಕೆ

Update: 2019-06-20 13:07 IST

ಲಕ್ನೊ, ಜೂ.20: ಸುಮಾರು 29 ಮಂದಿಯನ್ನು ಹೊತ್ತೊಯ್ಯತ್ತಿದ್ದ ವಾಹನವೊಂದು ಗುರುವಾರ ಬೆಳಗ್ಗೆ ಲಕ್ನೋದ ಕಾಲುವೆಯೊಂದಕ್ಕೆ ಉರುಳಿ ಬಿದ್ದಿರುವ ಘಟನೆ ನಡೆದಿದ್ದು, ಏಳು ಮಕ್ಕಳು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಎಲ್ಲ ಪ್ರಯಾಣಿಕರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಬರುತ್ತಿದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಲಕ್ನೋದ ಹೊರಭಾಗದ ನಗ್ರಾಮ್ ಪ್ರದೇಶದ ಇಂದಿರಾ ಕಾಲುವೆಗೆ ಬೆಳಗ್ಗೆ 3 ಗಂಟೆ ಸುಮಾರಿಗೆ ಉರುಳಿ ಬಿದ್ದಿದೆ.

ಸ್ಥಳೀಯರು 22 ಜನರನ್ನು ರಕ್ಷಿಸಿದ್ದು, ಏಳು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಲಿದ್ದು ಮುಳುಗು ತಜ್ಞರನ್ನು ಕಾರ್ಯಾಚರಣೆಯಲ್ಲಿ ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News