ಅಮೆರಿಕದ ಡ್ರೋನನ್ನು ಹೊಡೆದುರುಳಿಸಿದ ಇರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ

Update: 2019-06-20 14:15 GMT

ಹೊಸದಿಲ್ಲಿ, ಜೂ.20: ಅಮೆರಿಕದ ಡ್ರೋನ್ ಒಂದನ್ನು ಇರಾನ್ ಪಡೆಗಳು ಹೊಡೆದುರುಳಿಸಿದ್ದು, ಮಧ್ಯಪ್ರಾಚ್ಯದಲ್ಲಿ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಭಾರೀ ಮಿಲಿಟರಿ ಘರ್ಷಣೆಯ ಭೀತಿಯನ್ನು ಹುಟ್ಟುಹಾಕಿದೆ.

ಇರಾನ್ ನ ವಾಯುಪ್ರದೇಶಕ್ಕೆ ಪ್ರವೇಶಿಸಿದಾಗ ಡ್ರೋನ್ ಹೊಡೆದುರುಳಿಸಲಾಗಿತ್ತು ಎಂದು ಇರಾನ್ ಹೇಳಿದ್ದರೆ, ಅಮೆರಿಕ ಈ ಆರೋಪವನ್ನು ನಿರಾಕರಿಸಿದ್ದು, ಡ್ರೋನ್ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿತ್ತು ಎಂದು ಹೇಳಿದೆ.

ಇದು ಬೇಹುಗಾರಿಕಾ ಡ್ರೋನ್ ಎಂದು ಇರಾನ್ ಆರೋಪಿಸಿದ್ದು, ಈ ಕ್ರಮವು ಅಮೆರಿಕಕ್ಕೆ ನೀಡಿದ ಎಚ್ಚರಿಕೆಯಾಗಿದೆ ಎಂದು ಹೇಳಿದೆ.

“ಇದು ಅಮೆರಿಕಕ್ಕೆ ನೀಡಿದ ಎಚ್ಚರಿಕೆಯಾಗಿದ್ದು, ನಾವು ಯಾವುದೇ ದೇಶದೊಂದಿಗೆ ಯುದ್ಧವನ್ನು ಬಯಸುವುದಿಲ್ಲ. ಆದರೆ ನಾವು ಸಂಪೂರ್ಣವಾಗಿ, ಯುದ್ಧಕ್ಕೆ ಸಿದ್ಧರಿದ್ದೇವೆ” ಎಂದು ಇರಾನ್ ನ ರೆವೆಲ್ಯೂಶನರಿ ಗಾರ್ಡ್ ಕಾರ್ಪ್ಸ್ ಮೇಜರ್ ಜನರಲ್ ಹೊಸೈನ್ ಸಲಾಮಿ ಹೇಳಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News