ಉಗ್ರರಿಗೆ ಅನುಕೂಲಕರ ಸ್ಥಳದಿಂದ ಮಾತುಕತೆಗೆ ಅವಕಾಶ ನೀಡಬಾರದು

Update: 2019-06-20 17:08 GMT

ವಿಶ್ವಸಂಸ್ಥೆ, ಜೂ. 20: ಗಡಿಯಾಚೆಯಿಂದ (ಪಾಕಿಸ್ತಾನದಿಂದ) ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬೆಂಬಲ ಹಾಗೂ ಸುರಕ್ಷಿತ ಆಶ್ರಯತಾಣಗಳನ್ನು ಹೊಂದಿರುವ ಭಯೋತ್ಪಾದಕ ಗುಂಪುಗಳು ‘ಅನುಕೂಲಕರ ಸ್ಥಳ’ದಿಂದ ಸಂಧಾನ ನಡೆಸಲು ಅವಕಾಶ ನೀಡಬಾರದು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಕತರ್‌ನಲ್ಲಿ ಮುಂದಿನ ಸುತ್ತಿನ ಮಹತ್ವದ ಶಾಂತಿ ಮಾತುಕತೆಗಳನ್ನು ನಡೆಸಲು ಅಮೆರಿಕ ಮತ್ತು ತಾಲಿಬಾನ್ ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ ಭಾರತದ ಆಕ್ಷೇಪ ವ್ಯಕ್ತವಾಗಿದೆ.

ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಮುಂತಾದ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದರು.

ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಬುಧವಾರ ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.

ಅಫ್ಘಾನಿಸ್ತಾನದಲ್ಲಿ ಪ್ರಾಮಾಣಿಕ ಮತ್ತು ಶಾಶ್ವತ ಶಾಂತಿ ನೆಲೆಸಬೇಕಾದರೆ, ಭಯೋತ್ಪಾದಕ ಗುಂಪುಗಳಿಗೆ ನೀಡಲಾಗಿರುವ ಸುರಕ್ಷಿತ ಆಶ್ರಯತಾಣಗಳ ವಿಷಯವನ್ನು ಮೊದಲು ಇತ್ಯರ್ಥಗೊಳಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News