ಮೆದುಳಿನ ಉರಿಯೂತ: ಮಕ್ಕಳ ರಕ್ಷಣೆಗೆ ಬಿಹಾರಕ್ಕೆ ದೌಡಾಯಿಸಿದ ಡಾ.ಕಫೀಲ್ ಖಾನ್ ತಂಡ

Update: 2019-06-21 12:23 GMT

ಲಕ್ನೋ, ಜೂ.21: ಬಿಹಾರದಲ್ಲಿ ಮೆದುಳಿನ ಉರಿಯೂತದಿಂದಾಗಿ ಮತ್ತು ಸಂಪನ್ಮೂಲ ಹಾಗೂ ಮೂಲಸೌಕರ್ಯದಿಂದಾಗಿ ಪರಿಸ್ಥಿತಿ ಹದಗೆಟ್ಟಿದ್ದು, ಮುಝಫರ್ ಪುರದ ಪರಿಸ್ಥಿತಿಯಂತೂ ಹದಗೆಟ್ಟಿದೆ. ಇದುವರೆಗೆ ಈ ಮಾರಕ ಕಾಯಿಲೆಗೆ 100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಇಂಥ ಪರಿಸ್ಥಿತಿಯ ನಡುವೆಯೂ ಗೋರಖ್‍ ಪುರ ವೈದ್ಯರ ತಂಡ ಜನರಲ್ಲಿ ಭರವಸೆ ತುಂಬುವ ಕಾರ್ಯವನ್ನು ಮಾಡುತ್ತಿದೆ.

ಡಾ.ಕಲೀಫ್ ಖಾನ್ ನೇತೃತ್ವದ ತಂಡದಲ್ಲಿ ಡಾ.ಅರ್ಷದ್ ಅಂಜುಮ್, ಡಾ.ಎನ್.ಅಝಂ, ಡಾ.ಅನೀಶ್ ಗುಪ್ತಾ, ಡಾ.ಧರ್ಮವೀರ ಯಾದವ್ ಮತ್ತು ಇತರರು ಕಳೆದ ಮೂರು ದಿನಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳಲ್ಲಿ 700ಕ್ಕೂ ಹೆಚ್ಚು ಮಕ್ಕಳ ತಪಾಸಣೆ ನಡೆಸಿದ್ದಾರೆ.

ಗೋರಖ್‍ಪುರ ಬಿಆರ್ ಡಿ ಆಸ್ಪತ್ರೆಯ ಮಕ್ಕಳ ವಾರ್ಡ್‍ನಲ್ಲಿ 2017ರಲ್ಲಿ ಆಮ್ಲಜನಕ ಪೂರೈಕೆಯಿಂದ ನೂರಾರು ಮಕ್ಕಳು ಮೃತಪಟ್ಟ ಸಂದರ್ಭದಲ್ಲಿ ಕಫೀಲ್ ದೇಶಾದ್ಯಂತ ಸುದ್ದಿಯಾಗಿದ್ದರು. ಮಕ್ಕಳ ಜೀವ ಉಳಿಸುವ ಸಲುವಾಗಿ ಕೈಯಿಂದಲೇ ಹಣ ಖರ್ಚು ಮಾಡಿ ಕಫೀಲ್ ಆಮ್ಲಜನಕ ಸಿಲಿಂಡರ್‍ಗಳನ್ನು ಖರೀದಿಸಿದ್ದರು. ಆದರೆ ಮಕ್ಕಳ ಸಾಮೂಹಿಕ ಸಾವು ಮತ್ತು ಅಪರಾಧ ಪಿತೂರಿ ಆರೋಪವನ್ನು ಹೊರಿಸಿ ಏಳು ತಿಂಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News