ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಕ್ಕೆ ರೋಚಕ ಜಯ
ಲೀಡ್ಸ್, ಜೂ.21: ವೇಗದ ಬೌಲರ್‌ಗಳಾದ ಲಸಿತ್ ಮಾಲಿಂಗ, ಧನಂಜಯ ಡಿಸಿಲ್ವಾ ಹಾಗೂ ಸ್ಪಿನ್ನರ್ ಉದಾನ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ವಿಶ್ವಕಪ್‌ನ 27ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 20 ರನ್ ಗಳಿಂದ ಸೋಲುಂಡಿದೆ.
ಗೆಲ್ಲಲು 233 ರನ್ ಗುರಿ ಪಡೆದ ಇಂಗ್ಲೆಂಡ್ ತಂಡ 47 ಓವರ್‌ಗಳಲ್ಲಿ 212 ರನ್‌ಗೆ ಆಲೌಟಾಗಿದೆ.
ಇಂಗ್ಲೆಂಡ್‌ನ ಪರ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ (ಔಟಾಗದೆ 82, 89 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಜೋ ರೂಟ್ (57, 89 ಎಸೆತ, 3 ಬೌಂಡರಿ) ಒಂದಷ್ಟು ಪ್ರತಿರೋಧ ಒಡ್ಡಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಆರಂಭಿಕ ಆಟಗಾರ ಬೈರ್‌ಸ್ಟೋವ್ (0)ಖಾತೆ ತೆರೆಯುವ ಮೊದಲೇ ಮಾಲಿಂಗ ಬೌಲಿಂಗ್‌ನಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದರು. ಜೇಮ್ಸ್ ಇದಕ್ಕೂ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಆ್ಯಂಜೆಲೊ ಮ್ಯಾಥ್ಯೂಸ್(ಔಟಾಗದೆ 85,115 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 232 ರನ್ ಗಳಿಸಲ ಶಕ್ತವಾಯಿತು.