ಮರಾಠಿ ಕಲಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಿ: ಶಾಲೆಗಳಿಗೆ ಮಹಾರಾಷ್ಟ್ರ ಸಿಎಂ ಎಚ್ಚರಿಕೆ

Update: 2019-06-21 18:01 GMT

ಮುಂಬೈ, ಜೂ. 21: ರಾಜ್ಯದ ಎಲ್ಲ ಶಾಲೆಗಳಲ್ಲಿ ಮರಾಠಿ ಭಾಷೆ ಕಲಿಸುವ ಖಾತರಿ ನೀಡಲು ಸರಕಾರ ಕಾನೂನು ಜಾರಿಗೆ ತರಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಹೇಳಿದ್ದಾರೆ.

 ಈ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ವಿಧಾನ ಸಭೆಯಲ್ಲಿ ಶಿವಸೇನೆಯ ಶಾಸಕ ನೀಲಮ್ ಗೋರ್ಹೆ ಅವರ ಪ್ರಶ್ನೆಯೊಂದಕ್ಕೆ ಫಡ್ನವೀಸ್ ಈ ಪ್ರತಿಕ್ರಿಯೆ ನೀಡಿದರು. ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳ ಸಹಿತ ರಾಜ್ಯದ ಎಲ್ಲ ಶಾಲೆಗಳಲ್ಲಿ ಮರಾಠಿ ಕಡ್ಡಾಯದ ಸ್ಥಿತಿಗತಿ ತಿಳಿಯ ಬಯಸುವುದಾಗಿ ಗೋರ್ಹೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವೀಸ್, ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳ ಸಹಿತ ರಾಜ್ಯದ ಎಲ್ಲ ಶಾಲೆಗಳಲ್ಲಿ ಮರಾಠಿ ಕಲಿಸುವ ನಿಬಂಧನೆ ಈಗಾಗಲೇ ಇದೆ ಎಂದರು. ಇದರ ಹೊರತಾಗಿ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮರಾಠಿ ಭಾಷೆ ಕಲಿಸುತ್ತಿಲ್ಲ. ಅಂತಹ ಶಾಲೆಗಳ ವಿರುದ್ಧ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದರು.

 ಅಗತ್ಯವಾದರೆ, ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳ ಸಹಿತ ರಾಜ್ಯದ ಎಲ್ಲ ಶಾಲೆಗಳಲ್ಲಿ ಮರಾಠಿ ಭಾಷೆ ಬೋಧನೆಯ ಖಾತರಿ ನೀಡಲು ಈಗಿರುವ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News