ಸ್ಪೀಕರ್ ಸಮಿತಿಗೆ ನಾಲ್ವರು ಬಿಜೆಪಿ ಸಂಸದರ ನೇಮಕ

Update: 2019-06-21 18:05 GMT

ಹೊಸದಿಲ್ಲಿ, ಜೂ.21: ಲೋಕಸಭಾ ಸ್ಪೀಕರ್ ಹಾಗೂ ಉಪಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ ಸದನದ ಕಲಾಪಗಳ ನಿರ್ವಹಣೆಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಭಾಧ್ಯಕ್ಷರ ಸಮಿತಿಗೆ ಶುಕ್ರವಾರ ನಾಲ್ವರು ಬಿಜೆಪಿ ಸಂಸದರನ್ನು ನೇಮಿಸಿದ್ದಾರೆ.

 ರಮಾದೇವಿ, ಕಿರೀಟ್ ಪಿ.ಸೋಳಂಕಿ, ರಾಜೇಂದ್ರ ಅಗರ್‌ವಾಲ್ ಹಾಗೂ ಮೀನಾಕ್ಷಿ ಲೇಖಿ ಸಭಾಧ್ಯಕ್ಷರ ಸಮಿತಿಗೆ ನೇಮಕಗೊಂಡ ನಾಲ್ವರು ಬಿಜೆಪಿ ಸಂಸದರಾಗಿದ್ದಾರೆ. ಈ ಸಮಿತಿಗೆ ಇತರ ಪಕ್ಷಗಳ ನಾಯಕರು ತಮ್ಮ ಸದಸ್ಯರ ಹೆಸರನ್ನು ಸೂಚಿಸಿದಲ್ಲಿ ಸಮಿತಿಯ ಸದಸ್ಯ ಬಲವನ್ನು ಹೆಚ್ಚಿಸಲಾಗುವುದು ಎಂದರು. ಸಾಮಾನ್ಯವಾಗಿ ಸಭಾದ್ಯಕ್ಷರ ಸಮಿತಿಯಲ್ಲಿ ಹತ್ತು ಮಂದಿ ಸದಸ್ಯರಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News