ನಾಯಕ ವಿಲಿಯಮ್ಸನ್ ಶತಕ: ನ್ಯೂಝಿಲ್ಯಾಂಡ್ 291/8

Update: 2019-06-22 17:04 GMT

ಮ್ಯಾಂಚೆಸ್ಟರ್, ಜೂ.22: ನಾಯಕ ಕೇನ್ ವಿಲಿಯಮ್ಸನ್ ಶತಕದ ನೆರವಿನಲ್ಲಿ ನ್ಯೂಝಿಲೆಂಡ್ ತಂಡ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 8 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡ ಆರಂಭಿಕ ದಾಂಡಿಗರನ್ನು ಬೇಗನೆ ಕಳೆದುಕೊಂಡರೂ ನಾಯಕ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮೂರನೇ ವಿಕೆಟ್‌ಗೆ 160 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದರು.

ವಿಲಿಯಮ್ಸನ್ 148 ರನ್ (154ಎ, 14ಬೌ,1ಸಿ) , ರಾಸ್ ಟೇಲರ್ 69ರನ್(95ಎ, 7ಬೌ) ಗಳಿಸಿ ಔಟಾದರು.

ವಿಕೆಟ್ ಕೀಪರ್ ಟಾಮ್ ಲಥಾಮ್ 12 ರನ್, ಜಿಮ್ಮಿ ನಿಶಮ್ 28ರನ್, ಕಾಲಿನ್ ಡೆ ಗ್ರಾಂಡ್‌ಹೊಮ್ಮೆ 16ರನ್, ಮಿಚೆಲ್ ಸ್ಯಾಂಟ್ನೆರ್ 10 ರನ್ ಗಳಿಸಿದರು. ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್(0) ಮತ್ತು ಕಾಲಿನ್ ಮುನ್ರೊ (0)ಖಾತೆ ತೆರೆಯಲಿಲ್ಲ. ವೆಸ್ಟ್‌ಇಂಡೀಸ್ ತಂಡದ ಶೆಲ್ಡಾನ್ ಕೊಟ್ರೆಲ್ 56ಕ್ಕೆ 4 ವಿಕೆಟ್, ಕಾರ್ಲೊಸ್ ಬ್ರಾಥ್‌ವೇಟ್ 58ಕ್ಕೆ 2 ಮತ್ತು ಕ್ರಿಸ್ ಗೇಲ್ 8ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News