ಕೊನೆಯ ಓವರ್ ನಲ್ಲಿ ಶಮಿ ಹ್ಯಾಟ್ರಿಕ್: ಅಫ್ಘಾನ್ ವಿರುದ್ಧ ಭಾರತಕ್ಕೆ ರೋಚಕ ಜಯ

Update: 2019-06-22 17:52 GMT

ಸೌತಾಂಪ್ಟನ್, ಜೂ.22: ಮಾಜಿ ನಾಯಕ ಮುಹಮ್ಮದ್ ನಬಿ (52 ರನ್, 55 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನದ ಹೊರತಾಗಿಯೂ ಅಫ್ಘಾನಿಸ್ತಾನ ತಂಡ ಭಾರತದ ವಿರುದ್ಧ ವಿಶ್ವಕಪ್‌ನ 28ನೇ ಪಂದ್ಯದಲ್ಲಿ 11 ರನ್‌ಗಳ ಸೋಲನುಭವಿಸಿದೆ.

ಗೆಲ್ಲಲು 225 ರನ್ ಗುರಿ ಪಡೆದ ಅಫ್ಘಾನಿಸ್ತಾನ ಕೊನೆಯ ತನಕ ಹೋರಾಡಿ 213 ರನ್‌ಗೆ ಆಲೌಟಾಯಿತು. ಅಫ್ಘಾನ್‌ ಗೆ ಕೊನೆಯ ಓವರ್‌ನಲ್ಲಿ 16 ರನ್ ಅಗತ್ಯವಿತ್ತು. ಆದರೆ, ಅದು 4 ರನ್ ಗಳಿಸಿ 11 ರನ್‌ಗಳ ವೀರೋಚಿತ ಸೋಲುಂಡಿತು.

ಕೊನೆಯ ಓವರ್ ಎಸೆದ ಮುಹಮ್ಮದ್ ಶಮಿ(4-40) ಹ್ಯಾಟ್ರಿಕ್ ವಿಕೆಟ್ ಪಡೆದು ಗಮನ ಸೆಳೆದರು.

ಅಫ್ಘಾನ್ ಪರ ರಹ್ಮತ್ ಶಾ(36), ಗುಲ್ಬದ್ದೀನ್ ನೈಬ್(27) ಹಶ್ಮತುಲ್ಲಾ ಶಾಹಿದಿ(21), ನಜೀಬುಲ್ಲಾ ಝದ್ರಾನ್(21) ಹಾಗೂ ರಶೀದ್ ಖಾನ್(14)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತ ಪರ ಬುಮ್ರಾ(2-34), ಚಹಾಲ್(2-36) ಹಾಗೂ ಹಾರ್ದಿಕ್ ಪಾಂಡ್ಯ(2-51) ತಲಾ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 224 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News