ಶೀಘ್ರದಲ್ಲಿ ಭಾರತ ಪ್ರತಿ ಮನೆಯೂ ಟಿ.ವಿ. ಹೊಂದಿದ ಅತಿ ದೊಡ್ಡ ದೇಶ: ಜಾವ್ಡೇಕರ್

Update: 2019-06-22 18:22 GMT

ಶ್ರೀನಗರ, ಜೂ. 22: ಭಾರತ ಶೀಘ್ರದಲ್ಲಿ ಪ್ರತಿ ಮನೆಯೂ ಟಿ.ವಿ. ಹೊಂದಿರುವ ಜಗತ್ತಿನ ಅತಿ ದೊಡ್ಡ ದೇಶವಾಗಿ ಹೊರ ಹೊಮ್ಮಲಿದೆ ಎಂದು ಕೇಂದ್ರದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಶನಿವಾರ ಹೇಳಿದರು.

ಮುಂದಿನ ವರ್ಷಗಳಲ್ಲಿ ಪ್ರತಿ ಮನೆಯೂ ಟಿ.ವಿ. ಹೊಂದಿರಬೇಕು ಎಂಬ ಹೊಸ ಕನಸಿದೆ. ಭಾರತದಲ್ಲಿ 25 ಕೋಟಿ ಮನೆಗಳಿವೆ ಹಾಗೂ 18 ಕೋಟಿ ಟಿ.ವಿ.ಗಳಿವೆ. ಪ್ರಸ್ತುತ 7 ಕೋಟಿ ಮನೆಯಲ್ಲಿ ಟಿ.ವಿ.ಗಳಿಲ್ಲ ಎಂದು ಜಾವ್ಡೇಕರ್ ಹೇಳಿದರು. ಜಮ್ಮು ಹಾಗೂ ಕಾಶ್ಮೀರದ ಸೆಟಲೈಟ್ ವಾಹಿನಿ ದೂರದರ್ಶನ ಕಶಿರ್‌ನ ‘ಸಿಗ್ನೇಚರ್ ಟ್ಯೂನ್’ ಬಿಡುಗಡೆ ಮಾಡುವುದರೊಂದಿಗೆ ಡಿಸ್ ಟಿ.ವಿ. ಸೆಟ್ ಟಾಪ್ ಬಾಕ್ಸ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶನಿವಾರ ಸಂಜೆಯಿಂದ ಪ್ರತಿ ದಿನ ಪ್ರಸಾರವಾಗುವ ಡೋಗ್ರಿ ಭಾಷೆಯ ಮೊದಲ ಸುದ್ದಿ ಬುಲೆಟಿನ್ ಅನ್ನು ಜಾವ್ಡೇಕರ್ ಲೋಕಾರ್ಪಣೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News