8 ವರ್ಷಗಳ ಬಳಿಕ ಮೊದಲ ಬಾರಿ ಸ್ಟಂಪ್‌ಗೆ ಬಲಿಯಾದ ಧೋನಿ

Update: 2019-06-22 18:38 GMT

   ಸೌತಾಂಪ್ಟನ್, ಜೂ. 22: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ 2011ರ ಬಳಿಕ ಮೊದಲ ಬಾರಿ ಸ್ಟಂಪ್‌ಗೆ ಬಲಿಯಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಶನಿವಾರ ವಿಶ್ವಕಪ್‌ನ 28ನೇ ಪಂದ್ಯದಲ್ಲಿ ರಶೀದ್ ಖಾನ್ ಓವರ್‌ನಲ್ಲಿ ಧೋನಿ ಚೆಂಡನ್ನು ಎದುರಿಸಲು ಹೋಗಿ ಎಡವಿದರು. ಆಗ ವಿಕೆಟ್ ಕೀಪರ್ ಇಕ್ರಮ್ ಅಲಿ ಮಿಂಚಿನ ವೇಗದಲ್ಲಿ ಸ್ಟಂಪನ್ನು ಕೆಡವಿದರು. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ತನ್ನ ಚಾಣಾಕ್ಷ ಸ್ಟಂಪಿಂಗ್‌ನಿಂದಾಗಿ ಔಟ್ ಮಾಡುತ್ತಿದ್ದ ಧೋನಿ ಸ್ಟಂಪಿಂಗ್‌ಗೆ ಬಲಿಯಾದರು. 2011ರ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು ದೇವೇಂದ್ರ ಬಿಶೂ ಬೌಲಿಂಗ್‌ನಲ್ಲಿ ಸ್ಟಂಪ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News