ಕ್ರಿಕೆಟ್ ವಿಶ್ವಕಪ್: ಆಫ್ರಿಕ ವಿರುದ್ಧ ಪಾಕ್ ಜಯಭೇರಿ

Update: 2019-06-23 17:42 GMT

   ಲಂಡನ್ , ಜೂ. 23: ಲಾರ್ಡ್ಸ್‌ನಲ್ಲಿ ರವಿವಾರ ನಡೆದ ವಿಶ್ವಕಪ್‌ನ 30ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಪಾಕಿಸ್ತಾನ 49ರನ್‌ಗಳ ಜಯ ಗಳಿಸಿದೆ.

 ಗೆಲುವಿಗೆ 309 ರನ್ ಗಳಿಸಬೇಕಿದ್ದ ದಕ್ಷಿಣ ಆಫ್ರಿಕ ತಂಡ ನಿಗದಿತ 50 ಓವರ್‌ಗಳಲ್ಲಿ9 ವಿಕೆಟ್ ನಷ್ಟದಲ್ಲಿ 259ರನ್ ಗಳಿಸಲಷ್ಟೇ ಶಕ್ತವಾಗಿದೆ.

ಇದರೊಂದಿಗೆ ಆಫ್ರಿಕ 7ನೇ ಪಂದ್ಯದಲ್ಲಿ 5ನೇ ಸೋಲು ಅನುಭವಿಸಿದೆ. ಸೆಮಿಫೈನಲ್ ಹಾದಿ ದಕ್ಷಿಣ ಆಫ್ರಿಕ ತಂಡಕ್ಕೆ ಬಹುತೇಕ ಬಂದ್ ಆಗಿದೆ.

 ದಕ್ಷಿಣ ಆಫ್ರಿಕದ ನಾಯಕ ಎಫ್ ಡು ಪ್ಲೆಸಿಸ್ 63ರನ್, ವಿಕೆಟ್ ಕೀಪರ್ ಕ್ವಿಂಟನ್ ಡೆ ಕಾಕ್ 47ರನ್, ರಾಸೈ ವ್ಯಾನ್ ಡರ್ ಡುಸಾನ್ 36ರನ್, ಡೇವಿಡ್ ಮಿಲ್ಲರ್ 31 ರನ್, ಕ್ರಿಸ್ ಮೊರೀಸ್ 16 ರನ್ ಮತ್ತು ಫೆಹ್ಲುಕ್ವಾಯೋ ಔಟಾಗದೆ 46 ಗಳಿಸಿದರು.

ಪಾಕ್‌ನ ಶದಾಬ್ ಖಾನ್ 50ಕ್ಕೆ 3 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News