ನಿಮ್ಮ ‘ಹೊಸ ಭಾರತ’ವನ್ನು ನೀವೇ ಇಟ್ಟುಕೊಳ್ಳಿ, ಹಳೆಯ ಭಾರತವನ್ನು ನಮಗೆ ಮರಳಿಕೊಡಿ: ಗುಲಾಂ ನಬಿ ಆಝಾದ್

Update: 2019-06-24 13:48 GMT

ಹೊಸದಿಲ್ಲಿ, ಜೂ.24: ಕೇಂದ್ರ ಸರಕಾರವು ನ್ಯೂ ಇಂಡಿಯಾ (ಹೊಸ ಭಾರತ)ವನ್ನು ಇಟ್ಟುಕೊಳ್ಳಲಿ, ನಮಗೆ ಹಳೆಯ ಭಾರತವನ್ನು ಮರಳಿ ಕೊಡಲಿ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.

ಸಂಸತ್ ನಲ್ಲಿ ಮಾತನಾಡಿದ ಅವರು, “ಹಳೆಯ ಭಾರತದಲ್ಲಿ ಯಾವುದೇ ದ್ವೇಷವಿರಲಿಲ್ಲ, ಯಾವುದೇ ಕೋಪವಿರಲಿಲ್ಲ, ವೈರತ್ವವಿರಲಿಲ್ಲ, ಥಳಿತಗಳಿರಲಿಲ್ಲ. ಈ ಹೊಸ ಭಾರತದಲ್ಲಿ ಮನುಷ್ಯ ಮನುಷ್ಯನ ಶತ್ರುವಾಗಿದ್ದಾನೆ. ಹಿಂದೂ, ಮುಸ್ಲಿಂ, ಸಿಖ್ಖರು, ಕ್ರೈಸ್ತರು ಶಾಂತಿಯುತವಾಗಿ ಬದುಕುವ ಭಾರತವನ್ನು ನಮಗೆ ನೀಡಿ” ಎಂದವರು ಹೇಳಿದರು.

ಜಾರ್ಖಂಡ್ ಗುಂಪು ಥಳಿತ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, “ಜಾರ್ಖಂಡ್ ಗುಂಪು ಥಳಿತ ಮತ್ತು ಹಿಂಸಾಚಾರದ ಫ್ಯಾಕ್ಟರಿಯಾಗಿದೆ. ಪ್ರತಿ ವಾರ ಮುಸ್ಲಿಮರು ಮತ್ತು ದಲಿತರನ್ನು ಕೊಲ್ಲಲಾಗುತ್ತಿದೆ. ಪ್ರಧಾನಿಯವರೇ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ನ ನಿಮ್ಮ ಹೋರಾಟದ ಜೊತೆ ನಾವಿದ್ದೇವೆ. ಆದರೆ ಅದೆಲ್ಲೂ ಕಾಣುತ್ತಿಲ್ಲ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News