×
Ad

ಸೌದಿ ದೊರೆಯೊಂದಿಗೆ ಪಾಂಪಿಯೊ ಮಾತುಕತೆ

Update: 2019-06-24 22:37 IST

ಜಿದ್ದಾ (ಸೌದಿ ಅರೇಬಿಯ), ಜೂ. 24: ಅಮೆರಿಕ ಇರಾನ್ ವಿರುದ್ಧ ಹೇರಲು ಉದ್ದೇಶಿಸಿರುವ ಹೊಸ ಆರ್ಥಿಕ ದಿಗ್ಬಂಧನಗಳಿಗೆ ಮುಂಚಿತವಾಗಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಸೌದಿ ಅರೇಬಿಯದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಅಮೆರಿಕದ ಸೇನಾ ಬೇಹುಗಾರಿಕಾ ಡ್ರೋನನ್ನು ಇರಾನ್ ಹೊಡೆದುರುಳಿಸಿದ ದಿನಗಳ ಬಳಿಕ, ಪಾಂಪಿಯೊ ಸೌದಿ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಜಿದ್ದಾದಲ್ಲಿ ಭೇಟಿಯಾದರು.

ಬಳಿಕ ಪಾಂಪಿಯೊ, ಯುಎಇ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಿದ್ದಾರೆ.

ಇರಾನ್ ಒಡ್ಡುತ್ತಿರುವ ಸವಾಲನ್ನು ಎದುರಿಸುವಲ್ಲಿ ಸೌದಿ ಅರೇಬಿಯ ಮತ್ತು ಯುಎಇಗಳು ಎರಡು ಶ್ರೇಷ್ಠ ಮಿತ್ರದೇಶಗಳಾಗಿವೆ.

‘‘ನಾವು ಜಾಗತಿಕ ಮಿತ್ರಕೂಟವೊಂದನ್ನು ಹೇಗೆ ನಿರ್ಮಿಸಬಹುದು ಎಂಬ ಬಗ್ಗೆ ನಾವು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’’ ಎಂದು ಪಾಂಪಿಯೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News