ಡಲ್ಲಾಸ್: ಭಾರೀ ಬಿರುಗಾಳಿ: 1,000 ವಿಮಾನಗಳ ಹಾರಾಟ ವ್ಯತ್ಯಯ; 82,000 ಮನೆಗಳ ವಿದ್ಯುತ್ ಕಡಿತ

Update: 2019-06-24 17:16 GMT

ವಾಶಿಂಗ್ಟನ್, ಜೂ. 24: ಅಮೆರಿಕದ ಟೆಕ್ಸಾಸ್ ರಾಜ್ಯದ ಈಶಾನ್ಯ ವಲಯದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಡಲ್ಲಾಸ್‌ನಲ್ಲಿ ಶನಿವಾರ ರಾತ್ರಿ ಸುಮಾರು 1,000 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಅಥವಾ ವಿಳಂಬಿಸಲಾಗಿದೆ ಹಾಗೂ ಸೋಮವಾರ ಬೆಳಗ್ಗೆ 80,000ಕ್ಕೂ ಅಧಿಕ ಮನೆಗಳು ಮತ್ತು ಉದ್ಯಮಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ.

ಡಲ್ಲಾಸ್ ಫೋರ್ಟ್ ವರ್ತ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಡಿಲು ಬಡಿದ ಪರಿಣಾಮ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು ಎಂದು ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ಹೇಳಿದೆ.

ಸುಮಾರು 600 ವಿಮಾನಗಳ ಹಾರಾಟವನ್ನು ವಿಳಂಬಿಸಲಾಯಿತು ಹಾಗೂ 425 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಯಿತು.

ಮಧ್ಯರಾತ್ರಿಯ ಹೊತ್ತಿಗೆ ಬಿರುಗಾಳಿ ಲೂಸಿಯಾನ ಮತ್ತು ಅರ್ಕಾನ್ಸಸ್ ತಲುಪಿದಾಗ ಸುಮಾರು 82,000 ಮನೆಗಳು ಮತ್ತು ಉದ್ಯಮಗಳ ವಿದ್ಯುತ್ ಪೂರೈಕೆ ನಿಲುಗಡೆಗೊಂಡಿತು.

ಬಿರುಗಾಳಿಯಿಂದಾಗಿ ಯಾರೂ ಗಾಯಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News