ಗಾಝಾ ಪಟ್ಟಿಗೆ ತೈಲ ಪೂರೈಕೆ ಬಂದ್ ಮಾಡಿದ ಇಸ್ರೇಲ್

Update: 2019-06-25 17:38 GMT

ಜೆರುಸಲೇಮ್, ಜೂ. 25: ಬೆಂಕಿಕಾರಕ ರಾಸಾಯನಿಕಗಳನ್ನು ಒಳಗೊಂಡ ಬಲೂನ್‌ಗಳನ್ನು ಹೊಸದಾಗಿ ಗಾಝಾ ಪಟ್ಟಿಯಿಂದ ಇಸ್ರೇಲ್‌ನತ್ತ ಹಾರಿಬಿಡಲಾಗುತ್ತಿದೆ ಎಂದು ಆರೋಪಿಸಿ, ಗಾಝಾ ಪಟ್ಟಿಗೆ ಹೋಗಬೇಕಾಗಿರುವ ತೈಲ ಪೂರೈಕೆಯನ್ನು ಇಸ್ರೇಲ್ ಮಂಗಳವಾರ ನಿಲ್ಲಿಸಿದೆ.

‘‘ಬೆಂಕಿಕಾರಕ ರಾಸಾಯನಿಕಗಳನ್ನು ಹೊತ್ತ ಬಲೂನ್‌ಗಳನ್ನು ಗಾಝಾ ಪಟ್ಟಿಯಿಂದ ಇಸ್ರೇಲ್‌ನತ್ತ ಹಾರಿಬಿಡಲಾಗುತ್ತಿದೆ ಹಾಗೂ ಇದು ಗಡಿಯಾಚೆಯಲ್ಲಿ ಬೆಂಕಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ, ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

ಕರೀಮ್ ಶಾಲುಮ್ ಸರಕು ಸಾಗಣೆ ಗಡಿದಾಟಿನಲ್ಲಿ ಮಂಗಳವಾರ ಬೆಳಗ್ಗೆ ಇಂಧನ ಸಾಗಣೆಯನ್ನು ನಿಲ್ಲಿಸಲಾಗಿದೆ ಹಾಗೂ ಮುಂದಿನ ಸೂಚನೆಯವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹೇಳಿಕೆಯೊಂದರಲ್ಲಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News