ಕಪಿಲ್ ದೇವ್ ನಾಯಕತ್ವದ ಭಾರತ ವಿಶ್ವಕಪ್ ಜಯಿಸಿ 36 ವರ್ಷ

Update: 2019-06-25 18:24 GMT

ಮ್ಯಾಂಚೆಸ್ಟರ್, ಜೂ. 25: ಕಪಿಲ್ ದೇವ್ ನಾಯಕತ್ವದ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿ ಜೂನ್ 25ಕ್ಕೆ 36 ವರ್ಷಗಳು ಸಂದಿವೆ. ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆೆ. ಭಾರತದ ಕ್ರಿಕೆಟ್ ಅಭಿಮಾನಿಗಳು ಮತ್ತೆ ಭಾರತ ವಿಶ್ವಕಪ್ ಗೆಲ್ಲಬಹುದೆಂಬ ಕನಸು ಕಾಣುತ್ತ್ತಿದ್ದಾರೆ. 1983ರಲ್ಲಿ ಭಾರತ ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ನ್ನು ಮಣಿಸಿ ವಿಶ್ವಕಪ್‌ನ್ನು ತನ್ನದಾಗಿಸಿಕೊಂಡಿತ್ತು. ಆಗ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ವೆಸ್ಟ್‌ಇಂಡೀಸ್ ಕನಸು ಈಡೇರಲಿಲ್ಲ.

     1975 ಮತ್ತು 1979ರಲ್ಲಿ ವಿಶ್ವಕಪ್ ಜಯಿಸಿದ್ದ ವೆಸ್ಟ್‌ಇಂಡೀಸ್‌ಗೆ ಇನ್ನೊಮ್ಮೆ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ. ಭಾರತ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮತೊಮ್ಮೆ ಪ್ರಶಸ್ತಿ ಗೆದ್ದುಕೊಂಡಿತ್ತು. ಕಪಿಲ್ ದೇವ್ ತಂಡದಲ್ಲಿ ಸುನೀಲ್ ಗವಾಸ್ಕರ್ , ಶ್ರೀಕಾಂತ್ ,ಮೊದಲ ಹ್ಯಾಟ್ರಿಕ್ ರೂವಾರಿ ಚೇತನ್ ಶರ್ಮ ಇದ್ದರು. ಧೋನಿ ತಂಡದಲ್ಲಿ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮಿಂಚಿದ್ದರು. ಧೋನಿ ಹೋರಾಟ ನಡೆಸಿ ಭಾರತಕ್ಕೆ ಗೆಲುವು ತಂದು ಕೊಟ್ಟರು. ಇದೀಗ ಭಾರತ ವಿಶ್ವಕಪ್‌ನಲ್ಲಿ ಅಜೇಯವಾಗಿದ್ದು, ವಿಶ್ವಕಪ್ ಗೆಲ್ಲುವ ಪ್ರಯತ್ನವನ್ನು ಮತ್ತೊಮ್ಮೆ ನಡೆಸಲಿದೆ. 1983ರ ವಿಶ್ವಕಪ್ ತಂಡದ ಸದಸ್ಯರಾಗಿದ್ದ ರವಿ ಶಾಸ್ತ್ರಿ ಇದೀಗ ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News