ಹಿರಿಯ ನಟಿ,ನಿರ್ದೇಶಕಿ ವಿಜಯಾ ನಿರ್ಮಲಾ ನಿಧನ

Update: 2019-06-27 07:12 GMT

ಹೈದರಾಬಾದ್, ಜೂ.27: ಹಿರಿಯ ನಟಿ ಹಾಗೂ ನಿರ್ದೇಶಕಿ ವಿಜಯಾ ನಿರ್ಮಲಾ ಗುರುವಾರ ಬೆಳಗ್ಗಿನ ಜಾವ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪುತ್ರ ಹಾಗೂ ನಟ ನರೇಶ್ ಟ್ವಿಟರ್‌ನ ಮೂಲಕ ತಾಯಿ ನಿರ್ಮಲಾ ಸಾವಿನ ಸುದ್ದಿ ಬಹಿರಂಗಪಡಿಸಿದ್ದು, ಅಂತಿಮ ವಿಧಿವಿಧಾನ ನಾಳೆ ನಡೆಯಲಿದೆ ಎಂದು ಹೇಳಿದ್ದಾರೆ.

ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ವಿಜಯಾ ನಿರ್ಮಲಾ ನಟಿಸಿದ್ದರು. 44 ತೆಲುಗು ಸಿನಿಮಾಗಳಿಗೆ ನಿರ್ದೇಶನ ನೀಡಿದ್ದರು. ನಿರ್ಮಿಲಾ ಅವರು ಪತಿ ಕೃಷ್ಣ, ಮಗ ನರೇಶ್ ಹಾಗೂ ಮಲಮಗ, ನಟ ಮಹೇಶ್ ಬಾಬು ಅವರನ್ನು ಅಗಲಿದ್ದಾರೆ.

ತೆಲುಗು ಸಿನಿಮಾದಲ್ಲಿ ಬಾಲ ನಟಿಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ನಿರ್ಮಲಾ ಆ ಬಳಿಕ ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದರು. ವಿಜಯಾಗೆ ಎರಡು ಮದುವೆಯಾಗಿದ್ದು, ಮೊದಲಿಗೆ ಕೃಷ್ಣ ಮೂರ್ತಿ ಹಾಗೂ ಬಳಿಕ ನಟ ಕೃಷ್ಣರನ್ನು ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News