2 ತಿಂಗಳ ಮಗುವನ್ನು ಹೂತಿಟ್ಟು ಮನೆಗೆ ಬೆಂಕಿಯಿಟ್ಟ ಮಹಿಳೆ
Update: 2019-06-29 19:52 IST
ಲಕ್ನೋ, ಜೂ.29: ಮಹಿಳೆಯೊಬ್ಬಳು ತನ್ನ ಎರಡು ತಿಂಗಳ ಪುತ್ರಿಯನ್ನು ಮನೆಯೊಳಗೆ ಹೂತಿಟ್ಟು ಮನೆಗೆ ಬೆಂಕಿ ಹಚ್ಚಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಗು ಹುಟ್ಟಿದಂದಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮಹಿಳೆ ಖಿನ್ನತೆಗೆ ಒಳಗಾಗಿದ್ದಳು. ಶನಿವಾರ ಮಗು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಆದ್ದರಿಂದ ಅದನ್ನು ಮನೆಯೊಳಗೆ ಹುಗಿದಿಟ್ಟು ಮನೆಗೆ ಬೆಂಕಿ ಹಚ್ಚಿರುವುದಾಗಿ ಆಕೆ ನೆರೆಮನೆಯವರಲ್ಲಿ ಹೇಳಿ ಬಳಿಕ ಪರಾರಿಯಾಗಿದ್ದಳು .
ತಕ್ಷಣ ನೆರೆಮನೆಯವರು ಪೊಲೀಸರಿಗೆ ತಿಳಿಸಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯೊಳಗಿದ್ದ ಮಗುವಿನ ಮೃತದೇಹವನ್ನು ಹೊರತಂದಿದ್ದಾರೆ. ಬಳಿಕ ಮಹಿಳೆಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಕಾಯಲಾಗುತ್ತಿದೆ ಎಂದು ಎಎಸ್ಪಿ ಮಧುಬನ್ ಸಿಂಗ್ ಹೇಳಿದ್ದಾರೆ.