ಇರಾನ್ ತೈಲ ಆಮದು ಮಾಡುವ ಎಲ್ಲರ ವಿರುದ್ಧ ದಿಗ್ಬಂಧನ: ಅಮೆರಿಕ ಎಚ್ಚರಿಕೆ

Update: 2019-06-29 17:54 GMT

ಲಂಡನ್, ಜೂ. 29: ಇರಾನ್‌ನಿಂದ ತೈಲ ಆಮದು ಮಾಡುವ ಯಾವುದೇ ದೇಶದ ವಿರುದ್ಧ ಅಮೆರಿಕವು ದಿಗ್ಬಂಧನ ವಿಧಿಸಲಿದೆ ಹಾಗೂ ಈ ವಿಷಯದಲ್ಲಿ ಯವುದೇ ವಿನಾಯಿತಿಯಿಲ್ಲ ಎಂದು ಇರಾನ್‌ಗಾಗಿನ ಅಮೆರಿಕದ ವಿಶೇಷ ರಾಯಭಾರಿ ಬ್ರಯಾನ್ ಹುಕ್ ಶುಕ್ರವಾರ ಹೇಳಿದ್ದಾರೆ.

ಇರಾನ್ ತೈಲವನ್ನು ಏಶ್ಯಕ್ಕೆ ಮಾರಾಟ ಮಾಡುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ಇರಾನ್ ಕಚ್ಚಾ ತೈಲವನ್ನು ಯಾರೇ ಆಮದು ಮಾಡಿದರೂ ನಾವು ದಿಗ್ಬಂಧನ ವಿಧಿಸುತ್ತೇವೆ’’ ಎಂದರು.

ಇರಾನ್ ತೈಲ ಆಮದು ಮುಂದುವರಿಕೆ: ಚೀನಾ

ಇರಾನ್ ಮೇಲೆ ಅಮೆರಿಕದ ದಿಗ್ಬಂಧನದ ಹೊರತಾಗಿಯೂ, ಆ ದೇಶದಿಂದ ಮಾಡಲಾಗುತ್ತಿರುವ ಕಚ್ಚಾತೈಲ ಆಮದನ್ನು ಮುಂದುವರಿಸುವುದಾಗಿ ಚೀನಾ ಶುಕ್ರವಾರ ಹೇಳಿದೆ.

 ‘‘ಏಕಪಕ್ಷೀಯವಾಗಿ ಹೇರಲಾಗಿರುವ ದಿಗ್ಬಂಧನವನ್ನು ನಾವು ತಿರಸ್ಕರಿಸುತ್ತೇವೆ’’ ಎಂದು ಚೀನಾ ವಿದೇಶ ಸಚಿವಾಲಯದ ಶಸ್ತ್ರಾಸ್ತ್ರ ನಿಯಂತ್ರಣ ಇಲಾಖೆಯ ಮಹಾನಿರ್ದೇಶಕ ಫು ಕೊಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News