ಟರ್ಕಿ ಅಧ್ಯಕ್ಷ ಎರ್ದೋಗಾನ್ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ

Update: 2019-06-29 17:59 GMT

ಒಸಾಕ, ಜೂ. 29: ಜಪಾನ್‌ನ ಒಸಾಕದಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದ ಎರಡನೇ ದಿನದ ಕಲಾಪಗಳ ನೇಪಥ್ಯದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಉಭಯ ನಾಯಕರು ವ್ಯಾಪಾರ ಮತ್ತು ಬಂಡವಾಳ ಹೂಡಿಕೆ, ರಕ್ಷಣೆ ಮತ್ತು ಭಯೋತ್ಪಾದನೆ ನಿಗ್ರಹ ಮುಂತಾದ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.

ಭಾರತ ಮತ್ತು ಟರ್ಕಿ ನಡುವೆ ಬಲವಾದ ಸಂಬಂಧವನ್ನು ಬೆಳೆಸುವ ಬಗ್ಗೆಯೂ ಮೋದಿ ಮತ್ತು ಎರ್ದೊಗಾನ್ ಮಾತುಕತೆ ನಡೆಸಿದರು ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News