200 ಕೋ.ರೂ.ವೆಚ್ಚದಲ್ಲಿ ರಷ್ಯಾದಿಂದ ಟ್ಯಾಂಕ್ ನಿರೋಧಕ ಕ್ಷಿಪಣಿಗಳ ಖರೀದಿ ಒಪ್ಪಂದಕ್ಕೆ ಸಹಿ

Update: 2019-06-30 15:47 GMT

ಹೊಸದಿಲ್ಲಿ,ಜೂ.30: ಭಾರತವು ತುರ್ತು ಸಂದರ್ಭಗಳಲ್ಲಿ ಯುದ್ಧ ಸನ್ನದ್ಧತೆಯ ಉದ್ದೇಶದಿಂದ ತನ್ನ ಎಂಐ-35 ದಾಳಿ ಹೆಲಿಕಾಪ್ಟರ್‌ಗಳಿಗಾಗಿ 200 ಕೋ.ರೂ.ಗಳ ವೆಚ್ಚದಲ್ಲಿ ಸ್ಟ್ರಮಾಟಕ್ ಟ್ಯಾಂಕ್‌ನಿರೋಧಕ ಕ್ಷಿಪಣಿಗಳ ಖರೀದಿಗಾಗಿ ರಷ್ಯಾದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ.

ತುರ್ತು ಸಂದರ್ಭಗಳಿಗಾಗಿ ಖರೀದಿ ನಿಯಮಾವಳಿಗಳಡಿ ಮಾಡಿಕೊಳ್ಳಲಾಗಿರುವ ಒಪ್ಪಂದದ ಅನ್ವಯ ರಷ್ಯಾ ಮೂರು ತಿಂಗಳಲ್ಲಿ ಈ ಕ್ಷಿಪಣಿಗಳನ್ನು ಪೂರೈಸಬೇಕಿದೆ.

ವಾಯುಪಡೆಯು ಈ ನಿಯಮಾವಳಿಗಳಡಿ ಈ ಮೊದಲು ಸ್ಪೈಸ್ 2000 ಮತ್ತು ವಿವಿಧ ಇತರ ಬಾಂಬ್‌ಗಳು ಹಾಗೂ ಕ್ಷಿಪಣಿಗಳನ್ನು ಖರೀದಿಸಿದೆ.

ಇಸ್ರೇಲ್‌ನ ರಫೇಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದ್ದು,ಬಾಂಬ್‌ಗಳು ಮುಂದಿನ ಮೂರು ತಿಂಗಳಲ್ಲಿ ಪೂರೈಕೆಯಾಗುವ ನಿರೀಕ್ಷೆಯಿದೆ ಎಂದು ಈ ಮೂಲಗಳು ತಿಳಿಸಿದವು.

ಭಾರತವು ಕಳೆದೊಂದು ದಶಕಕ್ಕೂ ಹೆಚ್ಚಿನ ಸಮಯದಿಂದ ರಷ್ಯಾದಿಂದ ಕ್ಷಿಪಣಿಗಳನ್ನು ಖರೀದಿಸಲು ಪ್ರಯತ್ನಿಸುತ್ತಿತ್ತು, ಕೊನೆಗೂ ತುರ್ತು ಸಂದರ್ಭಗಳ ಖರೀದಿ ನಿಯಮಾವಳಿಗಳಡಿ ಈ ಬಯಕೆ ಈಡೇರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News