ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

Update: 2019-06-30 16:55 GMT

ಹೊಸದಿಲ್ಲಿ, ಜೂ.30: ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ನೂರು ರೂ. ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ತಿಳಿಸಿದೆ. ದಿಲ್ಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 737.50ರೂ. ಆಗಿದ್ದು ಸದ್ಯ 637ಕ್ಕೆ ಇಳಿಕೆಯಾಗಿದೆ. ಸಬ್ಸಿಡಿಸಹಿತ ಅನಿಲ ಸಿಲಿಂಡರ್ ಬೆಲೆ 494.35ರೂ. ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರಗಳು ಇಳಿಕೆಯಾಗಿರುವ ಕಾರಣ ಭಾರತೀಯ ಮಾರುಕಟ್ಟೆಯಲ್ಲೂ ಎಲ್‌ಪಿಜಿ ದರದಲ್ಲಿ ಕಡಿತ ಮಾಡಲಾಗಿದೆ ಎಂದು ಐಒಸಿ ತಿಳಿಸಿದೆ. ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗೆ ಗ್ರಾಹಕರು 494.35ರೂ. ಪಾವತಿಸಬೇಕಿದ್ದು ಉಳಿದ 142.65ರೂ.ವನ್ನು ಕೇಂದ್ರ ಸರಕಾರ ಸಬ್ಸಿಡಿ ಆಧಾರದಲ್ಲಿ ನೀಡುತ್ತದೆ ಮತ್ತು ಆ ಮೊತ್ತವನ್ನು ಸರಕಾರ ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News