​ಟೆಕ್ಸಸ್‌ನಲ್ಲಿ ವಿಮಾನ ದುರಂತ: 10 ಮಂದಿ ಮೃತ್ಯು

Update: 2019-07-01 04:15 GMT

ವಾಷಿಂಗ್ಟನ್: ಅವಳಿ ಎಂಜಿನ್ ಹೊಂದಿದ್ದ ಪುಟ್ಟ ಪ್ರಯಾಣಿಕ ವಿಮಾನ ಭಾನುವಾರ ಟೆಕ್ಸಸ್‌ನಲ್ಲಿ ಅಪಘಾತಕ್ಕೀಡಾಗಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಡಲ್ಲಾಸ್ ಕೌಂಟಿ ವೈದ್ಯಕೀಯ ಪರೀಕ್ಷಕರು 10 ಮಂದಿಯ ಮರಣವನ್ನು ದೃಢಪಡಿಸಿದ್ದು, ಯಾರೂ ಉಳಿದಿಲ್ಲ" ಎಂದು ಟೆಕ್ಸಸ್‌ನ ಎಡ್ಡಿಸನ್ ಪಟ್ಟಣದ ವಕ್ತಾರರು ಹೇಳಿದ್ದಾರೆ.

ಅವಳಿ ಎಂಜಿನ್‌ನ ಟರ್ಬೊಪ್ರಾಪ್ ಪ್ರಯಾಣಿಕ ವಿಮಾನ ಕಿಂಗ್ ಏರ್-350 ಅಪಘಾತಕ್ಕೆ ಕಾರಣ ಪತ್ತೆ ಹಚ್ಚಲು ತಂಡವನ್ನು ಎಡ್ಡಿಸನ್‌ಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ಟ್ವೀಟ್ ಮಾಡಿದೆ. ವಿಮಾನ ದುರಂತ ಅಥವಾ ದುರಂತದ ಕಾರಣದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಅಪಘಾತಕ್ಕೀಡಾದ ಖಾಸಗಿ ವಿಮಾನ, ಸ್ಥಳೀಯ ವಿಮಾನ ನಿಲ್ದಾಣದ ಹ್ಯಾಂಗರ್‌ನಲ್ಲಿ ಅಪಘಾತಕ್ಕೀಡಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ವಿಮಾನ ಟೇಕಾಫ್ ಆಗುವ ವೇಳೆ ಒಂದು ಎಂಜಿನ್ ಕಳೆದುಕೊಂಡ ವಿಮಾನ ಪಥಬದಲಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸಿಎನ್‌ಎನ್ ನ್ಯೂಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News