ದುಬೈ-ಮಸ್ಕತ್: ಜಗತ್ತಿನ ಅತಿ ಕಿರಿಯ ವಿಮಾನ ಮಾರ್ಗಕ್ಕೆ ಎಮಿರೇಟ್ಸ್ ಚಾಲನೆ

Update: 2019-07-01 16:38 GMT

ಅಬುಧಾಬಿ, ಜು. 1: ಯುಎಇಯ ಎಮಿರೇಟ್ಸ್ ಏರ್‌ ಲೈನ್ ಸೋಮವಾರ ದುಬೈ ಮತ್ತು ಮಸ್ಕತ್ ನಡುವೆ ವಿಮಾನ ಸೇವೆಯನ್ನು ಆರಂಭಿಸಿದೆ. ಇದು ಜಗತ್ತಿನ ಅತಿ ಕಿರಿಯ ವಿಮಾನ ಹಾರಾಟ ಮಾರ್ಗವಾಗಿದೆ.

‘‘ದುಬೈ ಮತ್ತು ಮಸ್ಕತ್ ನಡುವಿನ ಸರಾಸರಿ ಹಾರಾಟ ಅವಧಿ 40 ನಿಮಿಷ. ಇದು 42 ಮಂದಿಯ ತಂಡವೊಂದು ಏರ್‌ಬಸ್ ಎ380 ವಿಮಾನವನ್ನು ಸ್ವಚ್ಛಗೊಳಿಸಲು ತಗಲುವ ಸಮಯಕ್ಕಿಂತ ಕೇವಲ ಐದು ನಿಮಿಷ ಹೆಚ್ಚಾಗಿದೆ’’ ಎಂದು ಸೋಮವಾರ ಸರಣಿ ಟ್ವೀಟ್‌ಗಳಲ್ಲಿ ಏರ್‌ಲೈನ್ಸ್ ತಿಳಿಸಿದೆ.

‘‘ಏರ್‌ಬಸ್ ಎ380ನಲ್ಲಿರುವ ವಯರ್‌ನ ಉದ್ದವೇ 500 ಕಿ.ಮೀ. ಆಗಿದೆ. ದುಬೈ ಮತ್ತು ಮಸ್ಕತ್ ನಡುವಿನ ಅಂತರ (340 ಕಿ.ಮೀ.)ಕ್ಕಿಂತ ಇದು ಹೆಚ್ಚಾಗಿದೆ’’ ಎಂದಿದೆ.

  ಈ ಮೂಲಕ ಎಮಿರೇಟ್ಸ್ ತನ್ನದೇ ದಾಖಲೆಯನ್ನು ಮುರಿದಿದೆ. ಈ ಹಿಂದೆ ಅದು ದುಬೈ ಮತ್ತು ದೋಹಾ ನಡುವಿನ ಅತಿ ಕಿರಿಯ ಮಾರ್ಗದಲ್ಲಿ ಹಾರಾಟ ನಡೆಸುತ್ತಿತ್ತು. ಆದರೆ, 2017ರಲ್ಲಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಖತರ್ ಮೇಲೆ ಗರಿಷ್ಠ ಪ್ರಮಾಣದ ಆರ್ಥಿಕ ಮತ್ತು ರಾಜಕೀಯ ದಿಗ್ಬಂಧನ ವಿಧಿಸಿದ ಬಳಿಕ ಈ ಮಾರ್ಗ ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News